ADVERTISEMENT

ಶ್ರೀನಿಧಿ ಎಚ್ ವಿ ಅವರ ಕವನ: ರಾತ್ರಿ ರೈಲುಗಳು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 22:41 IST
Last Updated 21 ಫೆಬ್ರುವರಿ 2026, 22:41 IST
<div class="paragraphs"><p>ರೈಲುಗಳು&nbsp;</p></div>

ರೈಲುಗಳು 

   

ವಿವಿಧ ಚಿಂದಿಯನು ಸೇರಿ
ಹೊಲಿದ ಕೌದಿಯಿದು
ಚಿತ್ತಾರದಂಥ ಮೋಡಿ

ಹಗಲು ರಾತ್ರಿಯನು
ಹೆಣೆದ ಸೂಜಿಯಿದು
ಮುಂಬಯಿಯ ಲೋಕಲ್‌ ಗಾಡಿ 

ADVERTISEMENT

ಕೈಯ ಹಿಡಿಕೆಗಳ
ಮೈಯಲ್ಲಿ ತೂಗುತಿವೆ 
ತಂಗಾಳಿ ತಲೆಯ ತೀಡಿ

ಹಿಡಿಕೆ ಕಂಬಗಳು
ದಣಿದು ಬೆವರುತಿವೆ
ದಿನವಿಡೀ ಜನರ ನೋಡಿ

ಕಿಟಿಕಿ ಗಾಜುಗಳು
ಕತೆಯ ಹೇಳುತಿವೆ
ಚುಕ್ಕೆಗಳ ಹಿಂಡ ಕೂಡಿ

ಕೊನೆಯ ರೈಲುಗಳು
ನೆಮ್ಮದಿ ಹುಡುಕಿವೆ
ಪ್ರಶ್ನೆಗೆ ಉತ್ತರ ಬೇಡಿ

ಇನ್ನೆಷ್ಟು ದೂರ ಈ ಊರು? 
ಬಗೆದಷ್ಟು ಬಯಲು ಈ ಶಹರ
ಇದ ಬಲ್ಲವರು ಯಾರು ಪೂರ್ಣವಾಗಿ?

***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.