ADVERTISEMENT

ಜಯದೇವಿ ಗಾಯಕವಾಡ ಅವರ ಕವಿತೆ: ಹೆಣ್ಣೆಂದರೆ....!!

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 23:06 IST
Last Updated 2 ಮಾರ್ಚ್ 2024, 23:06 IST
<div class="paragraphs"><p>ಮಹಿಳೆ!</p></div>

ಮಹಿಳೆ!

   

ಹೆಣ್ಣೆಂದರೆ....!!

ಹೆಣ್ಣೆಂದರೆ ಫಲವತ್ತಾದ ಮಣ್ಣು
ನಡೆದಾಡುವ ಸುಳಿದಾಡುವ ಗಾಳಿ
ಕತ್ತಲೆಯ ಮಹಾ ಸಾಮ್ರಾಜ್ಯಕ್ಕೆ
ಮಹಾಬೆಳಕು ಅವಳು

ADVERTISEMENT

ಹರಿಯುವ ಪ್ರಶಾಂತ ಮಹಾನದಿ                                

 ಮಹಾ ಕಾವ್ಯ ಮಹಾ ಕಾದಂಬರಿ
 ಬತ್ತದ ಆರಿಹೋಗದ ಕಣಜದಂತೆ
 ಕೋಗಿಲೆಯಾಗಿ ಹಾಡುತ್ತಾ ನಿಂತ
 ಮಹಾಕವಿ ಕವಯತ್ರಿ ಅವಳು

 ನೋವಿನಲ್ಲಿ ಎದ್ದು ನೋವಿನಲ್ಲಿ ಮಲಗಿದವಳು

ಸಂಕಟ ಯಾತನೆ ಗಟಗಟನೆ ಕುಡಿದವಳು
ಅವಳಿಗಿಲ್ಲ ಧಿಮಾಕು ಬಹುಪರಾಕು
ಎಲ್ಲ ಬಲ್ಲವಳು ಆದರೂ ಮಹಾಮೌನಿ ಅವಳು

ಬೆಂಕಿಯಲ್ಲಿ ನಡೆದು ಮಹಾ ಬೆಂಕಿಯಾದವಳು

ಬಂಡೆಗಲ್ಲನ್ನೇ ಒಡೆದು ನೀರು ಚಿಮ್ಮಿಸಿದವಳು

ಸಂಸಾರದ ಭಾರವನ್ನೆಲ್ಲ ಹೊತ್ತ

ಮಹಾಪರ್ವದಂತೆ  ಬಂಡೆಗಲ್ಲಾಗಿ  ನಿಂತವಳು

ಹೆಣ್ಣೆಂದರೆ ಕಾಗೆ ಬಳಗದವಳು
ಹಂಚಿ ಉಂಡು ನಕ್ಕು ನಲಿವಳು
ಮುಳ್ಳುಗಳ ಜೊತೆ ಹೂವಾಗಿ ಅರಳಿದವಳು
ಇವಳಿಗೆ ಮತ್ತೊಂದು ಹೆಸರು ಬೇಕೆ ?  

ಮಹಾ ಮಾನವತಾವಾದಿ ಅವಳು!!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.