ಪುಟಾಣಿ ಮಕ್ಕಳೇ ಕೇಳುವಿರಾ
ನಾ ಹೇಳುವ ಆಟವ ಬಲ್ಲಿರಾ?
ಉದ್ದ ಕೋಲು ಸಣ್ಣಕೋಲು
ಬೇಕು ನನ್ನ ಆಡಲು
ಗುರಿಯ ಇಟ್ಟು ಉದ್ದಕೋಲು
ಸಣ್ಣಕೋಲು ಹೊಡೆವುದು
ಹೇಳು ಬೇಗ ಜಾಣ ಮಗುವೇ
ಯಾವ ಆಟ ಬಲ್ಲೆಯಾ?
ಹೌದು ಸರಿ ಆಟ ಅದುವೇ
ಚಿನ್ನಿ-ದಾಂಡು ಆಡ್ತೀಯಾ?
ನನ್ನ ಆಟ ಆಡಲು
ಬೆಳೆಸ ಬೇಕು ಮರವನು
ಮರದಿಂದ ಮರಕೆ ನೀನು
ಜಿಗಿದು ಜಿಗಿದು ಹಾರಲು
ಹೇಳು ಬೇಗ ಜಾಣ ಮಗುವೇ
ಯಾವ ಆಟ ಬಲ್ಲೆಯಾ?
ಹೌದು, ಸರಿ ಆಟ ಅದುವೇ
ಮರಕೋತಿ ಆಟ ಆಡ್ತೀಯಾ?
ನೆಲದಿ ಮನೆಯ ಮಾಡಿ ನೀನು
ಕಲ್ಲ ಬಿಲ್ಲೆ ತರುವೆಯಾ
ಒಂಟಿ ಕಾಲ ಜಿಗಿತ ಮಾಡಿ
ಎಲ್ಲ ಮನೆಗೆ ಬಿಲ್ಲೆ ದೂಡಿ
ನನ್ನ ಆಟ ಆಡುವೆಯಾ?
ಹೇಳು ಬೇಗ ಜಾಣ ಮಗುವೇ
ಯಾವ ಆಟ ಬಲ್ಲೆಯಾ?
ಹೌದು, ಸರಿ ಆಟ ಅದುವೇ
ಕುಂಟಾ-ಬಿಲ್ಲೆ ಆಡ್ತೀಯಾ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.