ADVERTISEMENT

ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ರಾಮ ದೇವರಲ್ಲ: ಭಗವಾನ್

ಸಾಹಿತ್ಯ ಸಮ್ಮೇಳನದಲ್ಲಿ ಗದ್ದಲ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 8:52 IST
Last Updated 25 ನವೆಂಬರ್ 2017, 8:52 IST
ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ರಾಮ ದೇವರಲ್ಲ: ಭಗವಾನ್
ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ರಾಮ ದೇವರಲ್ಲ: ಭಗವಾನ್   

ಮೈಸೂರು: 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತ ವೇದಿಕೆ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶನಿವಾರ ನಡೆದ ಅಲಕ್ಷಿತ ಸಮುದಾಯಗಳು ಗೋಷ್ಠಿಯಲ್ಲಿ ಸಾಹಿತಿ ಭಗವಾನ್ ಹಾಗೂ ಸಿದ್ದಸ್ವಾಮಿ ಮಾತನಾಡುವಾಗ ಸಭಿಕರು ಗದ್ದಲ ಎಬ್ಬಿಸಿದರು. ಇದರಿಂದ ಸಿದ್ದಸ್ವಾಮಿ ತಮ್ಮ ಮಾತನ್ನು ಅರ್ಧಕ್ಕೆ ಮೊಟಕುಗೊಳಿಸಿದರು.

ಉಡುಪಿಯಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ರಾಮ ಮಂದಿರ ಕಟ್ಟುವ ಚರ್ಚೆ ನಡೆಯುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಸುದ್ದಿಗಳಿಗಿಂತ ಹೆಚ್ಚಾಗಿ ಆ ವಿಚಾರಕ್ಕೆ ಪ್ರಾಧಾನ್ಯ ನೀಡಿವೆ. ಇದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಭಗವಾನ್ ಟೀಕಿಸಿದರು.

ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ರಾಮ ದೇವರಲ್ಲ, ದೇಶದ ಇತಿಹಾಸ ಸುಳ್ಳಿನ ಕಂತೆ. ಇದನ್ನು ಪಠ್ಯದಲ್ಲಿ ಅಳವಡಿಸಲು ಸರ್ಕಾರ ತೊಡಗಿದೆ. ನೀವೆಲ್ಲ ಗುಲಾಮರು ಎಂದು ಕಿಡಿಕಾರಿದರು.  ನಂತರ ಭಗವಾನ್ ಪರ ಮತ್ತು ವಿರೋಧ ಕುರಿತು ಸಭಿಕರು ಗದ್ದಲ ಎಬ್ಬಿಸಿದರು. ಪೊಲೀಸರು ಮಧ್ಯಪ್ರವೇಶ ಮಾಡಿ ಬಿಗಿಭದ್ರತೆಯಲ್ಲಿ ಭಗವಾನ್ ಅವರನ್ನು ಕರೆದುಕೊಂಡು ಹೋದರು.

ADVERTISEMENT

ಈ ವೇಳೆ ಪತ್ರಕರ್ತೆ ಗೌರ ಲಂಕೇಶ್ ಗೆ ಬಂದ ಸಾವು ಒಳ್ಳೆಯ ಸಾವು. ಅಂತಹ ಸಾವು ನನಗೆ ಬಂದರೆ ಸಂತೋಷ ಪಡುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.