ADVERTISEMENT

ಔಡಿ ಕ್ಯು5 ಫೇಸ್‌ಲಿಫ್ಟ್‌ ಆವೃತ್ತಿ ಬಿಡುಗಡೆ

ಪಿಟಿಐ
Published 23 ನವೆಂಬರ್ 2021, 15:49 IST
Last Updated 23 ನವೆಂಬರ್ 2021, 15:49 IST
ಔಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್‌ ಸಿಂಗ್‌ ಧಿಲ್ಲೋನ್‌ ಮತ್ತು ಬಾಲಿವುಡ್‌ ನಟ ಸಿದ್ಧಾರ್ಥ್‌ ಮಲ್ಹೋತ್ರಾ ಅವರು ಹೊಸ ‘ಕ್ಯು5’ ಬಿಡುಗಡೆ ಮಾಡಿದರು –ಪಿಟಿಐ ಚಿತ್ರ
ಔಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್‌ ಸಿಂಗ್‌ ಧಿಲ್ಲೋನ್‌ ಮತ್ತು ಬಾಲಿವುಡ್‌ ನಟ ಸಿದ್ಧಾರ್ಥ್‌ ಮಲ್ಹೋತ್ರಾ ಅವರು ಹೊಸ ‘ಕ್ಯು5’ ಬಿಡುಗಡೆ ಮಾಡಿದರು –ಪಿಟಿಐ ಚಿತ್ರ   

ಮುಂಬೈ: ಐಷಾರಾಮಿ ಕಾರು ತಯಾರಿಸುವ ಜರ್ಮನಿಯ ಔಡಿ ಕಂಪನಿಯು ಐದು ಆಸನಗಳ ಎಸ್‌ಯುವಿ ‘ಕ್ಯು5’ನ ಫೇಸ್‌ಲಿಫ್ಟ್‌ ಆವೃತ್ತಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಟೆಕ್ನಾಲಜಿ ಮತ್ತು ಪ್ರೀಮಿಯಂ ಪ್ಲಸ್‌ ಎನ್ನುವ ಎರಡು ಅವತರಣಿಕೆಗಳಲ್ಲಿ ಇದು ಲಭ್ಯವಿದ್ದು, ಎಕ್ಸ್‌ ಷೋರೂಂ ಬೆಲೆಯು ಕ್ರಮವಾಗಿ ₹ 63.77 ಲಕ್ಷ ಮತ್ತು ₹ 58.93 ಲಕ್ಷ ಇದೆ.

ಇಂದು ಬಿಡುಗಡೆ ಮಾಡಿರುವುದನ್ನೂ ಒಳಗೊಂಡು 2021ರಲ್ಲಿ ಕಂಪನಿಯು ಒಟ್ಟಾರೆ ಒಂಭತ್ತು ವಾಹನಗಳನ್ನು ಬಿಡುಗಡೆ ಮಾಡಿದಂತಾಗಿದೆ. ‘ಕ್ಯು5’ ಎಸ್‌ಯುವಿ 2.0 ಲೀಟರ್‌ ಟಿಎಫ್‌ಎಸ್‌ಐ ಎಂಜಿನ್‌ ಹೊಂದಿದ್ದು, ಔರಂಗಾಬಾದ್‌ನಲ್ಲಿ ಇರುವ ಸ್ಕೋಡಾ ಆಟೊ ಫೋಕ್ಸ್‌ವ್ಯಾಗನ್‌ ಇಂಡಿಯಾದ ಘಟಕದಲ್ಲಿ ತಯಾರಿಸಲಾಗಿದೆ. ಪಾರ್ಕ್‌ ಅಸಿಸ್ಟ್, ಔಡಿ ವರ್ಚುವಲ್‌ ಕಾಕ್‌ಪಿಟ್‌ ಪ್ಲಸ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಕಂಪನಿಯು ತಿಳಿಸಿದೆ.

ಆರಾಮದಾಯಕ, ಐಷಾರಾಮಿ ಮತ್ತು ಕ್ರೀಡಾಸಕ್ತಿಯ ಮಿಶ್ರಣದೊಂದಿಗೆ ಪ್ರತಿದಿನದ ಬಳಕೆಗೆ ಈ ಎಸ್‌ಯುವಿ ಹೇಳಿ ಮಾಡಿಸಿದ್ದಾಗಿದೆ ಎಂದು ಔಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್‌ ಸಿಂಗ್‌ ಧಿಲ್ಲೋನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.