ADVERTISEMENT

5.9 ಸೆಕೆಂಡ್‌ಗೆ 100 ಕಿ.ಮೀ ವೇಗ: ಬಹುನಿರೀಕ್ಷಿತ ಔಡಿ ಕ್ಯು8 ಭಾರತದಲ್ಲಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 11:07 IST
Last Updated 15 ಜನವರಿ 2020, 11:07 IST
ಔಡಿ
ಔಡಿ   

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕವಿರಾಟ್ ಕೊಹ್ಲಿ ಮತ್ತು ಔಡಿ ಮುಖ್ಯಸ್ಥ ಬಲ್ಬೀರ್ ಸಿಂಗ್ ಅವರು ಭಾರತದ ಮಾರುಕಟ್ಟೆಗೆ ಹೊಸ ಔಡಿ ಕ್ಯು8 ಎಸ್‌ಯುವಿ ಅನ್ನು ಬುಧವಾರ ಬಿಡುಗಡೆ ಮಾಡಿದರು.

3 ಲೀಟರ್‌ ಟ್ರಬೊಚಾರ್ಜ್ಡ್ ಪೆಟ್ರೋಲ್‌ ಎಂಜಿನ್‌ ಹೊಂಡಿರುವ ಕ್ಯು8 0–100 ಕಿ.ಮೀ ವೇಗ ಮುಟ್ಟಲು ಕೇವಲ 5.9ಸೆಕೆಂಡ್‌ತೆಗೆದುಕೊಳ್ಳುತ್ತದೆ.

ಕಂಪೆನಿಯ ಬಹು ನಿರೀಕ್ಷಿತ, ಅತ್ಯಾಧುನಿಕ ಹಾಗೂ ದುಬಾರಿ ಎಸ್‌ಯುವಿ ಇದಾಗಿದ್ದು,ಇದರ ಎಕ್ಸ್ ಷೋರೂಂ ಬೆಲೆ ₹1.34 ಕೋಟಿ. ಸದ್ಯ 200 ಎಸ್‌ಯುವಿಗಳನ್ನು ಮಾತ್ರ ಇಲ್ಲಿ ಮಾರಾಟ ಮಾಡಲಾಗುತ್ತದೆ.

ADVERTISEMENT

‘ಐಷಾರಾಮಿ ಕಾರುಗಳ ಮೇಲೆ ಆಮದು ತೆರಿಗೆ ಮತ್ತು ಜಿಎಸ್‌ಟಿ ಹೆಚ್ಚಿರುವುದರಿಂದ ಬೆಲೆ ದುಬಾರಿಯಾಗಿದೆ. ಸರ್ಕಾರವು ಜಿಎಸ್‌ಟಿಯನ್ನು ಇಳಿಸಿದರೆ, ಮಾರುಕಟ್ಟೆ ಸುಧಾರಿಸಬಹುದು’ಎಂದು ಔಡಿ ಮುಖ್ಯಸ್ಥ ಬಲ್ಬೀರ್ ಸಿಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.