ADVERTISEMENT

ಹೊಸ ಪಲ್ಸರ್‌ ಬೆಲೆ ₹ 1.28 ಲಕ್ಷ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 18:13 IST
Last Updated 22 ಜೂನ್ 2022, 18:13 IST
ಹೊಸ ಪಲ್ಸರ್‌ ಎನ್‌160
ಹೊಸ ಪಲ್ಸರ್‌ ಎನ್‌160   

ನವದೆಹಲಿ (ಪಿಟಿಐ): ಬಜಾಜ್‌ ಆಟೊ ಕಂಪನಿಯು ದೇಶದ ಮಾರುಕಟ್ಟೆಗೆ ಬುಧವಾರ ಹೊಸ ಪಲ್ಸರ್‌ ಎನ್‌160 ಬೈಕ್‌ ಬಿಡುಗಡೆ ಮಾಡಿದ್ದು, ಇದರ ಎಕ್ಸ್ ಷೋರೂಂ ಬೆಲೆ ₹ 1.28 ಲಕ್ಷ ಇದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆ ಆಗಿರುವ ಪಲ್ಸರ್‌ 250 ಪ್ಲಾಟ್‌ಫಾರಂನಲ್ಲಿಯೇ ಹೊಸ ಪಲ್ಸರ್‌ ಎನ್‌160 ನಿರ್ಮಿಸಲಾಗಿದೆ. ಡ್ಯುಯಲ್‌ ಚಾನಲ್‌ ಎಬಿಎಸ್‌ ಒಳಗೊಂಡಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

165 ಸಿಸಿ ಎಂಜಿನ್‌ ಇದ್ದು, ಯುಎಸ್‌ಬಿ ಮೊಬೈಲ್‌ ಚಾರ್ಜಿಂಗ್‌, ಗಿಯರ್‌ ಪೊಸಿಷನ್ ಇಂಡಿಕೇಟರ್‌ ಸೇರಿ
ದಂತೆ ಹಲವು ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ ಎಂದು ಹೇಳಿದೆ.

ADVERTISEMENT

ರಸ್ತೆ ಸವಾರಿಯ ಅನುಭವವನ್ನು ಕಟ್ಟಿಕೊಡಲು ಹೊಸ ಪಲ್ಸರ್‌ ಹೇಳಿ ಮಾಡಿಸಿದ್ದಾಗಿದೆ ಎಂದು ಕಂಪನಿಯ ಮೋಟರ್‌ಸೈಕಲ್ಸ್‌ನ ಅಧ್ಯಕ್ಷ ಸಾರಂಗ್‌ ಕಾನಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.