ADVERTISEMENT

ವಿದ್ಯುತ್‌ ಚಾಲಿತ ಸೆಡಾನ್‌ ‘ಬಿಎಂಡಬ್ಲ್ಯು ಐ4’: ಬೆಲೆ ₹ 69.9 ಲಕ್ಷ

ಪಿಟಿಐ
Published 26 ಮೇ 2022, 11:17 IST
Last Updated 26 ಮೇ 2022, 11:17 IST
ಬಿಎಂಡಬ್ಲ್ಯು ಐ4 –ಎಎಫ್‌ಪಿ ಚಿತ್ರ
ಬಿಎಂಡಬ್ಲ್ಯು ಐ4 –ಎಎಫ್‌ಪಿ ಚಿತ್ರ   

ಗುರುಗ್ರಾಮ: ಐಷಾರಾಮಿ ಕಾರು ತಯಾರಿಸುವ ಬಿಎಂಡಬ್ಲ್ಯು ಕಂಪನಿಯು ಸಂಪೂರ್ಣ ವಿದ್ಯುತ್‌ ಚಾಲಿತ ‘ಐ4’ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಪರಿಚಯಾತ್ಮಕ ಬೆಲೆ ₹ 69.9 ಲಕ್ಷ ಇದೆ.

ಆರು ತಿಂಗಳಿನಲ್ಲಿ ಮೂರು ವಿದ್ಯುತ್ ಚಾಲಿತ ವಾಹನ ಬಿಡುಗಡೆ ಮಾಡುವುದಾಗಿ ಕಂಪನಿಯು ಕಳೆದ ನವೆಂಬರ್‌ನಲ್ಲಿ ಘೋಷಿಸಿತ್ತು. ಇದರ ಭಾಗವಾಗಿ ಈಗಾಗಲೇ ಎಸ್‌ಯುವಿ ಐಎಕ್ಸ್‌ ಮತ್ತು ಹ್ಯಾಚ್‌ಬ್ಯಾಕ್‌ ಮಿನಿ ಬಿಡುಗಡೆ ಮಾಡಿದ್ದು, ಈ ಸಾಲಿಗೆ ‘ಐ4’ ಸಹ ಸೇರಿಕೊಂಡಿದೆ.

ಹೊಸ ಕಾರು ಐದನೇ ಪೀಳಿಗೆಯ ಬಿಎಂಡಬ್ಲ್ಯು ಇ–ಡ್ರೈವ್‌ ತಂತ್ರಜ್ಞಾನ ಹೊಂದಿದೆ. 5.7 ಸೆಕೆಂಡ್‌ಗಳಲ್ಲಿ ಈ ಕಾರು ಪ್ರತಿ ಗಂಟೆಗೆ 100 ಕಿ.ಮೀ. ವೇಗವನ್ನು ತಲುಪಬಲ್ಲದು. ಇದು ಲಿಥಿಯಂ ಅಯಾನ್‌ ಬ್ಯಾಟರಿ ಹೊಂದಿದ್ದು, ಪ್ರತಿ ಗಂಟೆಗೆ 80.7 ಕಿಲೊವಾಟ್‌ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ADVERTISEMENT

‘ಭಾರತದ ಮಾರುಕಟ್ಟೆಗೆ ವಿದ್ಯುತ್‌ ಚಾಲಿತ ಮಧ್ಯಮ ಗಾತ್ರದ ಸೆಡಾನ್‌ ಬಿಡುಗಡೆ ಮಾಡಲು ಸಂತೋಷ ಆಗುತ್ತಿದೆ. ವಿದ್ಯುತ್ ಚಾಲಿತ ವಾಹನ ವಿಭಾಗದಲ್ಲಿ ಕಂಪನಿಯ ಮೂರನೇ ಉತ್ಪನ್ನ ಇದಾಗಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 590 ಕಿಲೋ ಮೀಟರ್ ಪ್ರಯಾಣಿಸಬಹುದು’ ಎಂದು ಬಿಎಂಡಬ್ಲ್ಯು ಸಮೂಹದ ಭಾರತದ ಅಧ್ಯಕ್ಷ ವಿಕ್ರಂ ಪವ್ಹಾ ಹೇಳಿದ್ದಾರೆ.

ಕಂಪನಿಯ ಜಾಲತಾಣದಲ್ಲಿ ಬಿಎಂಡಬ್ಲ್ಯು ಐ4 ಬುಕಿಂಗ್‌ ಮಾಡಬಹುದು. ಜುಲೈನಿಂದ ವಿತರಣೆ ಆರಂಭ ಆಗಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.