ADVERTISEMENT

ಬಿಎಂಡಬ್ಲ್ಯು ಎಲೆಕ್ಟ್ರಿಕ್‌ ಎಸ್‌ಯುವಿ ‘ಐಎಕ್ಸ್‌’ ಬಿಡುಗಡೆ

ಪಿಟಿಐ
Published 13 ಡಿಸೆಂಬರ್ 2021, 13:38 IST
Last Updated 13 ಡಿಸೆಂಬರ್ 2021, 13:38 IST
ವಿದ್ಯುತ್ ಚಾಲಿತ ಬಿಎಂಡಬ್ಲ್ಯು ಐಎಕ್ಸ್‌
ವಿದ್ಯುತ್ ಚಾಲಿತ ಬಿಎಂಡಬ್ಲ್ಯು ಐಎಕ್ಸ್‌   

ನವದೆಹಲಿ: ಐಷಾರಾಮಿ ಕಾರು ತಯಾರಿಸುವ ಜರ್ಮನಿಯ ಬಿಎಂಡಬ್ಲ್ಯು ಕಂಪನಿಯು ಭಾರತದ ಮಾರುಕಟ್ಟೆಗೆ ತನ್ನ ಮೊದಲ ವಿದ್ಯುತ್‌ ಚಾಲಿತ (ಇ.ವಿ.) ಎಸ್‌ಯುವಿ ‘ಐಎಕ್ಸ್‌’ ಬಿಡುಗಡೆ ಮಾಡಿದೆ. ಇದರ ಪರಿಚಯಾತ್ಮಕ ಬೆಲೆ ₹ 1.16 ಕೋಟಿ.

ಕಂಪನಿಯು ಆರು ತಿಂಗಳಿನಲ್ಲಿ ಮೂರು ವಿದ್ಯುತ್ ಚಾಲಿತ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಮೊದಲ ವಾಹನ ಇದಾಗಿದೆ. 2022ರ ಏಪ್ರಿಲ್‌ ಆರಂಭದಲ್ಲಿ ಈ ಎಸ್‌ಯುವಿಯನ್ನು ಗ್ರಾಹಕರಿಗೆ ವಿತರಿಸಲಾಗುವುದು ಎಂದು ಹೇಳಿದೆ. ಒಮ್ಮೆ ಚಾರ್ಜ್‌ ಮಾಡಿದರೆ ಕ್ರಮಿಸುವ ದೂರ ಕನಿಷ್ಠ 372 ಕಿಲೋ ಮೀಟರ್‌, ಗರಿಷ್ಠ 425 ಕಿಲೋ ಮೀಟರ್ ಎಂದು ಕಂಪನಿಯು ತಿಳಿಸಿದೆ.

ಈ ಎಸ್‌ಯುವಿ ಅನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವುದು. ಬಿಎಂಡಬ್ಲ್ಯು ವಿತರಣಾ ಕೇಂದ್ರಗಳು ಮತ್ತು shop.bmw.in ಮೂಲಕ ಬುಕಿಂಗ್ ಮಾಡಬಹುದಾಗಿದೆ ಎಂದು ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾ ಪ್ರಕಟಣೆ ತಿಳಿಸಿದೆ.

ADVERTISEMENT

ಈ ವಾಹನವು ಎರಡು ಎಲೆಕ್ಟ್ರಾನಿಕ್‌ ಮೋಟರ್‌ಗಳು ಹಾಗೂ ರಿಯರ್‌ ಆ್ಯಕ್ಸೆಲ್‌ ಹೊಂದಿದೆ. ಪರಿಚಯಾತ್ಮಕ ಕೊಡುಗೆಯಲ್ಲಿ ಸ್ಮಾರ್ಟ್‌ ಬಿಎಂಡಬ್ಲ್ಯು ವಾಲ್‌ಬಾಕ್ಸ್‌ ಚಾರ್ಜರ್‌ ಇರಲಿದೆ. 11 ಕಿಲೋವಾಟ್‌ ಎಸಿ ಚಾರ್ಜರ್‌ ಮೂಲಕ 7 ಗಂಟೆಗಳಲ್ಲಿ ಶೇಕಡ 100ರಷ್ಟು ಚಾರ್ಜ್‌ ಮಾಡಬಹುದು. 150 ಕಿಲೋವಾಟ್‌ ಡಿಸಿ ಚಾರ್ಜರ್‌ ಮೂಲಕ 31 ನಿಮಿಷಗಳಲ್ಲಿ ಶೇ 80ರವರೆಗೆ, 50 ಕಿಲೋ ವಾಟ್‌ ಡಿಸಿ ಚಾರ್ಜರ್‌ನಲ್ಲಿ 73 ನಿಮಿಷಗಳಲ್ಲಿ ಶೇ 80ರಷ್ಟು ಚಾರ್ಜ್‌ ಮಾಡಬಹುದು. ದೇಶದಾದ್ಯಂತ 35 ನಗರಗಳ ತನ್ನ ಡೀಲರ್‌ ಕೇಂದ್ರಗಳಲ್ಲಿ ವೇಗದ ಚಾರ್ಜಿಂಗ್‌ ವ್ಯವಸ್ಥೆ ಕಲ್ಪಿಸುವುದಾಗಿ ಕಂಪನಿಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.