ADVERTISEMENT

ಮಹೀಂದ್ರಾದ ಮೊದಲ ಬಿಎಸ್‌–6 ಎಸ್‌ಯುವಿ; XUV300

ಏಜೆನ್ಸೀಸ್
Published 4 ಡಿಸೆಂಬರ್ 2019, 11:34 IST
Last Updated 4 ಡಿಸೆಂಬರ್ 2019, 11:34 IST
ಮಹೀಂದ್ರಾ 'ಎಕ್ಸ್‌ಯುವಿ300' ಕಾರು
ಮಹೀಂದ್ರಾ 'ಎಕ್ಸ್‌ಯುವಿ300' ಕಾರು    

ಬೆಂಗಳೂರು:ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಲಿಮಿಟೆಡ್‌ ಬಿಎಸ್‌ 6 ಗುಣಮಟ್ಟ ಹೊಂದಿರುವ ತನ್ನ ಮೊದಲ ಕಾರನ್ನು ಮಂಗಳವಾರ ಬಿಡುಗಡೆ ಮಾಡಿದೆ.

ಮಹೀಂದ್ರಾ 'ಎಕ್ಸ್‌ಯುವಿ300' ಕಾರು ಬಿಎಸ್‌–6 ಗುಣಮಟ್ಟದ 1.2 ಲೀಟರ್‌ ಟರ್ಬೊ ಪೆಟ್ರೋಲ್‌ ಇಂಜಿನ್‌ ಹೊಂದಿದ್ದು, ಬೆಲೆಯಲ್ಲಿ ಬಿಎಸ್‌–4 ಮಾದರಿಯ ವಾಹನಕ್ಕಿಂತ ₹20,000 ಹೆಚ್ಚಿಸಲಾಗಿದೆ. ಬಿಎಸ್‌–6'ಎಕ್ಸ್‌ಯುವಿ300' ಕಾರಿನ ಆರಂಭಿಕ ಬೆಲೆ ₹8.30 ಲಕ್ಷ ಎಂದು ಕಂಪನಿ ತಿಳಿಸಿದೆ.

ಹೊಸ 'ಎಕ್ಸ್‌ಯುವಿ300' W8 ಮಾದರಿಯ ಕಾರಿನ ಬೆಲೆ ₹11.99 ಲಕ್ಷ ನಿಗದಿಯಾಗಿದೆ. ಬಿಎಸ್‌–6 ಗುಣಮಟ್ಟದ ಇಂಧನ ದೇಶದ ಎಲ್ಲ ಭಾಗಗಳಲ್ಲಿ ಲಭ್ಯವಾಗುತ್ತಿದ್ದಂತೆ ಬಿಎಸ್‌–6 ಡೀಸೆಲ್‌ ಇಂಜಿನ್‌ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಕಂಪನಿ ತಿಳಿಸಿದೆ. ಆ ವರೆಗೂ ಬಿಎಸ್‌–4 ಗುಣಮಟ್ಟದ ಡೀಸೆಲ್‌ ಇಂಜಿನ್‌ ವಾಹನಗಳು ಖರೀದಿಗೆ ಸಿಗಲಿವೆ.

ADVERTISEMENT

ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ದೇಶದಲ್ಲಿ 2020ರ ಏಪ್ರಿಲ್‌ 1ರಿಂದ ಹೊಸ ವಾಹನಗಳಲ್ಲಿ ಬಿಎಸ್‌–6 ಗುಣಮಟ್ಟದ ಇಂಜಿನ್‌ ಕಡ್ಡಾಯಗೊಳಿಸಲಾಗಿದೆ. ದ್ವಿಚಕ್ರ ವಾಹನಗಳು, ಕಾರು ಹಾಗೂ ವಾಣಿಜ್ಯ ಬಳಕೆ ಟ್ರಕ್‌ ಸೇರಿದಂತೆ ಎಲ್ಲ ವಾಹನಗಳಿಗೂ ಬಿಎಸ್‌–6 ಗುಣಮಟ್ಟ ಅನ್ವಯವಾಗಲಿದೆ.

2019ರ ಫೆಬ್ರುವರಿಯಲ್ಲಿ ಬಿಡುಗಡೆಯಾಗಿ ಈವರೆಗೂ ಸುಮಾರು 40,000 'ಎಕ್ಸ್‌ಯುವಿ300' ಕಾರುಗಳು ಮಾರಾಟವಾಗಿವೆ.'ಎಕ್ಸ್‌ಯುವಿ300' ಮಾರುತಿ ಸುಜುಕಿ ವಿತಾರಾ ಬ್ರೀಜಾ, ಟಾಟಾ ಮೋಟಾರ್ಸ್‌ನ ನೆಕ್ಸಾನ್‌ ಹಾಗೂ ಫೋರ್ಡ್‌ನ ಇಕೊಸ್ಪೋರ್ಟ್‌ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.