ADVERTISEMENT

ಭಾರತಕ್ಕೆ ಎಸ್‌ಡಬ್ಲುಎಂ ಸೂಪರ್ ಡ್ಯುಯಲ್ ಟಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2018, 9:03 IST
Last Updated 14 ಜೂನ್ 2018, 9:03 IST
ಎಸ್‌ಡಬ್ಲುಎಂ ಸೂಪರ್ ಡ್ಯುಯಲ್ ಟಿ
ಎಸ್‌ಡಬ್ಲುಎಂ ಸೂಪರ್ ಡ್ಯುಯಲ್ ಟಿ   

ಇಟಾಲಿಯನ್ ಬ್ರ್ಯಾಂಡ್‌ನ ಮೊದಲ ಅಡ್ವೆಂಚರ್ ಸೂಪರ್ ಬೈಕ್ ಸೂಪರ್ ಡ್ಯುಯಲ್ ಟಿ ಪರಿಚಿತಗೊಳ್ಳಲಿದ್ದು, ಈ ಕಂಪನಿಯಿಂದ ಭಾರತಕ್ಕೆ ಬರುತ್ತಿರುವ ಮೊದಲ ಬೈಕ್ ಇದಾಗಿದೆ.

ಎಸ್‌ಡಬ್ಲುಎಂ (ಸ್ಪೀಡಿ ವರ್ಕಿಂಗ್ ಮೋಟಾರ್ಸ್) ತನ್ನ ಅಡ್ವೆಂಚರ್ ಮೋಟಾರು ಸೈಕಲ್ ಅನ್ನು ಇತ್ತೀಚೆಗೆ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದು, ಜೂನ್ ಜುಲೈನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಎಸ್‌ಡಬ್ಲುಎಂ 1971ರಲ್ಲಿ ಇಟಲಿಯಲ್ಲಿ ಸ್ಥಾಪಿತವಾಗಿದ್ದು, ಕೈನೆಟಿಕ್ ಗ್ರೂಪ್ ಮೂಲಕ ಇಲ್ಲಿ ಮಾರಾಟ ಕಾಣುತ್ತಿತ್ತು.
ಮಹಾರಾಷ್ಟ್ರದಲ್ಲಿ ಬೈಕ್ ಅಸೆಂಬಲ್ ಆಗಲಿದೆ. ಇದನ್ನು ಎರಡು ಆವೃತ್ತಿಗಳಲ್ಲಿ ಹೊರತರುತ್ತಿದ್ದು, ಭಾರತೀಯ ರಸ್ತೆಯನ್ನು ಗಮನದಲ್ಲಿಟ್ಟುಕೊಂಡು ಸೂಪರ್ ಡ್ಯುಯಲ್ ಟಿ ಹಾಗೂ ಆಫ್ ರೋಡ್ ಅನ್ನು ಉದ್ದೇಶವಾಗಿಟ್ಟುಕೊಂಡು ಸೂಪರ್ ಡ್ಯುಯಲ್ ಎಕ್ಸ್ ವಿನ್ಯಾಸಗೊಂಡಿದೆ.

ADVERTISEMENT

ಸ್ಟೈಲಿಂಗ್‌ನಲ್ಲಿ, ಅಡ್ವೆಂಚರ್ ಮೋಟಾರು ಸೈಕಲ್‌ನ ಅಂಶಗಳಾದ ವಿಂಡ್‌ಸ್ಕ್ರೀನ್, ಟ್ರಾವೆಲ್ ಸಸ್ಪೆನ್ಷನ್, ನಕಲ್ ಗಾರ್ಡ್, ಸ್ಪೋಕ್ ವೀಲ್‌ಗಳು ಇವೆ. ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಲು ಸ್ಲಂಗ್ ಎಕ್ಸ್‌ಹಾಸ್ಟ್ ಅಳವಡಿಸಲಾಗಿದೆ. 600 ಸಿಸಿ ಸಿಂಗಲ್ ಸಿಲಿಂಡರ್, ನಾಲ್ಕು ವಾಲ್ವ್ ಡಿಒಎಚ್‌ಸಿ ಲಿಕ್ವಿಡ್ ಕೂಲ್ಡ್ ಮೋಟಾರು ಇದ್ದು, ಇದು 57 ಎಚ್‌ಪಿ ಮತ್ತು 53.5 ಎನ್‌ಎಂ ಪೀಕ್ ಟಾರ್ಕ್ ಶಕ್ತಿ ಉತ್ಪಾದಿಸಲಿದೆ. ಈ ಮೋಟಾರಿಗೆ 6 ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್ ಇದೆ.

ಸಿಂಗಲ್ 300 ಎಂಎಂ ಡಿಸ್ಕ್ ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ 220 ಎಂಎಂ ಬ್ರೇಕಿಂಗ್ ಇದೆ. 19 ಲೀಟರ್ ಫ್ಯುಯಲ್ ಟ್ಯಾಂಕ್ ಸಾಮರ್ಥ್ಯ ಇದರದ್ದು. ಟೂರಿಂಗ್‌ಗೆ ಹೇಳಿಮಾಡಿಸಿದಂತಿರುವ ಇದರ ಬೆಲೆ ಅಂದಾಜು ಆರು ಲಕ್ಷ ರೂಪಾಯಿ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.