ಸಾಂದರ್ಭಿಕ ಚಿತ್ರ
ಬೆಂಗಳೂರು: ಸರಕು ಸಾಗಣೆ ವಾಹನ ತಯಾರಿಕಾ ಕ್ಷೇತ್ರದ ಪ್ರಮುಖ ಕಂಪನಿಗಳ ಪೈಕಿ ಒಂದಾಗಿರುವ ಟಾಟಾ ಮೋಟರ್ಸ್, ಹೊಸ ‘ಏಸ್ ಪ್ರೋ’ ಬಿಡುಗಡೆ ಮಾಡಿದೆ. ಈ ಮಿನಿ ಟ್ರಕ್‌ನ ಆರಂಭಿಕ ಬೆಲೆ ₹3.99 ಲಕ್ಷ ಮಾತ್ರ ಎಂದು ಕಂಪನಿ ಹೇಳಿದೆ.
ಇದು ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ ನಾಲ್ಕು ಚಕ್ರಗಳ ಮಿನಿ ಟ್ರಕ್. ಇದು ಅಸಾಧಾರಣವಾದ ದಕ್ಷತೆಯನ್ನು ಹೊಂದಿದೆ, ಬೇರೆ ಬೇರೆ ಉದ್ದೇಶಗಳಿಗೆ ಇದನ್ನು ಬಳಕೆ ಮಾಡಿಕೊಳ್ಳಬಹುದು. ಹೊಸ ತಲೆಮಾರಿನ ಉದ್ಯಮಿಗಳ ಬಲ ಹೆಚ್ಚಿಸುವ ಉದ್ದೇಶದಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಮಿನಿ ಟ್ರಕ್ ಪೆಟ್ರೋಲ್, ಸಿಎನ್‌ಜಿ ಮತ್ತು ಪೆಟ್ರೋಲ್ ಹಾಗೂ ವಿದ್ಯುತ್ ಚಾಲಿತ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ ಎಂದು ಕೂಡ ಕಂಪನಿಯು ಹೇಳಿದೆ.
ಈ ವಾಹನ ಖರೀದಿಗೆ ಹಣಕಾಸಿನ ನೆರವು ಒದಗಿಸಲು ಟಾಟಾ ಮೋಟರ್ಸ್ ಕಂಪನಿಯು ವಿವಿಧ ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್‌ಬಿಎಫ್‌ಸಿ) ಜೊತೆ ಒಪ್ಪಂದ ಮಾಡಿಕೊಂಡಿದೆ.
‘ಟಾಟಾ ಏಸ್ ಪ್ರೋ ಮಾದರಿಯನ್ನು ಗ್ರಾಹಕರಿಂದ ಸಲಹೆಗಳನ್ನು ಪಡೆದು ಅಭಿವೃದ್ಧಿಪಡಿಸಲಾಗಿದೆ, ಅವರ ವಿವಿಧ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ವಿವಿಧ ಭೂಪ್ರದೇಶಗಳು ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ಈ ವಾಹನವನ್ನು ಕಠಿಣ ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ಟಾಟಾ ಮೋಟರ್ಸ್ ಕಂಪನಿಯ ವಾಣಿಜ್ಯ ವಾಹನಗಳ ವಿಭಾಗದ ಉಪಾಧ್ಯಕ್ಷ ಮತ್ತು ವ್ಯಾಪಾರ ಮುಖ್ಯಸ್ಥ ಪಿನಾಕಿ ಹಲ್ದಾರ್ ಹೇಳಿದ್ದಾರೆ.
ಈ ವಾಹನದ ಇ.ವಿ ಆವೃತ್ತಿಯು ಒಮ್ಮೆ ಚಾರ್ಜ್ ಮಾಡಿದರೆ 155 ಕಿ.ಮೀ. ಸಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.