ADVERTISEMENT

ಔಡಿ: ಆನ್‌ಲೈನ್‌ ಮಾರಾಟಕ್ಕೆ ಚಾಲನೆ

ಏಜೆನ್ಸೀಸ್
Published 11 ಮೇ 2020, 20:15 IST
Last Updated 11 ಮೇ 2020, 20:15 IST
   

ನವದೆಹಲಿ: ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಔಡಿ ಇಂಡಿಯಾ, ಭಾರತದಲ್ಲಿ ಆನ್‌ಲೈನ್‌ ಮಾರಾಟ ಮತ್ತು ಸೇವೆಗೆ ಚಾಲನೆ ನೀಡಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಗ್ರಾಹಕರಿಗೆ ಮನೆಯಿಂದಲೇ ಬುಕಿಂಗ್‌ ಮಾಡಲು ಅನುಕೂಲ ಆಗುವಂತೆ ಈ ಕ್ರಮ ಕೈಗೊಂಡಿದೆ.

ಗ್ರಾಹಕರು ಮನೆಯಲ್ಲಿಯೇ ಕುಳಿತು, ತಮ್ಮಿಷ್ಟದ ವಾಹನವನ್ನು ಖರೀದಿಸಬಹುದು. ಅದಕ್ಕಾಗಿ ಹಣಕಾಸಿನ ಆಯ್ಕೆಗಳು, ಬೇಕಿರುವ ವೈಶಿಷ್ಟ್ಯಗಳನ್ನು ಆಯ್ದುಕೊಳ್ಳಬಹುದು.

ADVERTISEMENT

‘ಮೂರನೇ ತ್ರೈಮಾಸಿಕದಲ್ಲಿ ಆನ್‌ಲೈನ್‌ ಸೇವೆಗೆ ಚಾಲನೆ ನೀಡುವ ಯೋಜನೆ ರೂಪಿಸಲಾಗಿತ್ತು. ಆದರೆ, ಲಾಕ್‌ಡೌನ್‌ ಇರುವುದರಿಂದ ಮುಂಚಿತವಾಗಿಯೇ ಎರಡನೇ ತ್ರೈಮಾಸಿಕದಲ್ಲಿಯೇ ಚಾಲನೆ ನೀಡಲಾಗಿದೆ’ ಎಂದು ಕಂಪನಿಯ ಭಾರತದ ಮುಖ್ಯಸ್ಥ ಬಲ್ಬೀರ್‌ ಸಿಂಗ್‌ ಧಿಲ್ಲೋನ್‌ ತಿಳಿಸಿದ್ದಾರೆ.

ಕಾರ್‌ ಸರ್ವಿಸ್‌ಗೆ ಆನ್‌ಲೈನ್‌ನಲ್ಲಿಯೇ ಬುಕ್‌ ಮಾಡಿದರೆ, ಮನೆಬಾಗಿಲಿಗೆ ಬಂದು ಕಾರನ್ನು ತೆಗೆದುಕೊಂಡು ಹೋಗಿ ಸರಿಪಡಿಸಿ ಮತ್ತೆ ಹಿಂದಿರುಗಿಸುವ ವ್ಯವಸ್ಥೆ ಇದೆ. ಮಾಹಿತಿಗೆ: www.audi.in ಸಂಪರ್ಕಿಸಿ.

ಬಜಾಜ್‌, ರೆನೊ ಡೀಲರ್‌ಶಿಪ್‌ ಕಾರ್ಯಾರಂಭ

ಬಜಾಜ್‌ ಆಟೊ ಮತ್ತು ರೆನೊ ಇಂಡಿಯಾ ಕಂಪನಿಗಳು ತಮ್ಮ ಡೀಲರ್‌ಶಿಪ್‌ ಮತ್ತು ಸೇವಾ ಕೇಂದ್ರಗಳನ್ನು ಮತ್ತೆ ಆರಂಭಿಸಿವೆ.

ಲಾಕ್‌ಡೌನ್‌ ಮಾರ್ಗದರ್ಶಿ ಸೂತ್ರಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಾರಂಭ ಮಾಡಲಾಗಿದೆ. ಸಿಬ್ಬಂದಿ ಮತ್ತು ಗ್ರಾಹಕರ ಸುರಕ್ಷತೆಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿವೆ.

ಹೀರೊ ಸೈಕಲ್ಸ್‌: ಹೀರೊ ಸೈಕಲ್ಸ್‌ ಕಂಪನಿಯು ತನ್ನ ಪಂಜಾಬ್‌ ಮತ್ತು ಬಿಹಾರದಲ್ಲಿನ ಘಟಕಗಳಲ್ಲಿ ಶೇ 30ರಷ್ಟು ತಯಾರಿಕೆಯನ್ನು ಮತ್ತೆ ಆರಂಭಿಸಿದೆ.

ನಿಸಾನ್‌ ಇಂಡಿಯಾ: ಚೆನ್ನೈನಲ್ಲಿನ ತಯಾರಿಕಾ ಘಟಕದಿಂದ ಬಿಎಸ್‌6 ವಾಹನಗಳನ್ನು ಹಸಿರು ಮತ್ತು ಕಿತ್ತಲೆ ವಲಯದಲ್ಲಿನ ಡೀಲರ್ಸ್‌ಗಳಿಗೆ ವಿತರಿಸುವುದಕ್ಕೆ ಚಾಲನೆ ನೀಡಲಾಗಿದೆ ಎಂದು ನಿಸಾನ್‌ ಮೋಟರ್‌ ಇಂಡಿಯಾ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.