ADVERTISEMENT

BMW: ಮುಂದಿನ ತಿಂಗಳು ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸೆಡಾನ್ ಐ4 ಭಾರತಕ್ಕೆ ಲಗ್ಗೆ

ಪಿಟಿಐ
Published 28 ಏಪ್ರಿಲ್ 2022, 16:06 IST
Last Updated 28 ಏಪ್ರಿಲ್ 2022, 16:06 IST
 ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸೆಡಾನ್ ಐ4
ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸೆಡಾನ್ ಐ4   

ನವದೆಹಲಿ: ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಬಿಎಂಡಬ್ಲ್ಯು ತನ್ನ ಎಲೆಕ್ಟ್ರಿಕ್ ಸೆಡಾನ್ ಐ4 ಅನ್ನು ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ.ಎಲೆಕ್ಟ್ರಿಕ್ ಕಾರುಗಳು ವಿಭಾಗದಲ್ಲಿ ಬಿಎಂಡಬ್ಲ್ಯು ಗ್ರಾಹಕರ ವಿಶ್ವಾಸ ಗೆಲ್ಲುವುದನ್ನು ಮುಂದುವರೆಸಲಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಬಿಎಂಡಬ್ಲ್ಯುಮುಂದಿನ ಆರು ತಿಂಗಳಲ್ಲಿ ಭಾರತದಲ್ಲಿ ಮೂರು ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಅದರಲ್ಲಿಎಲೆಕ್ಟ್ರಿಕ್ ಎಸ್‌ಯುವಿ ಐಎಕ್ಸ್ ಹಾಗೂಎಲೆಕ್ಟ್ರಿಕ್ ಮಿನಿ ಲಕ್ಸುರಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ.

ಎಲೆಕ್ಟ್ರಿಕ್ ಸೆಡಾನ್ ಐ4 ಈಗಾಗಲೇ ಕೆಲ ದೇಶಗಳಲ್ಲಿ ಇದೇ ವರ್ಷದ ಆರಂಭದಲ್ಲಿ ಲಭ್ಯವಾಗಿತ್ತು. ಇದೀಗ ಮೇ 26 ರಿಂದ ಭಾರತದಲ್ಲಿ ಬುಕಿಂಗ್ ಆರಂಭವಾಗಲಿದೆ ಎಂದು ಬಿಎಂಡಬ್ಲ್ಯುಇಂಡಿಯಾ ಸಮೂಹದ ಸಿಇಒ ವಿಕ್ರಮ್ ಪೌಹಾ ತಿಳಿಸಿದ್ದಾರೆ.

ADVERTISEMENT

ಭಾರತದಲ್ಲಿ ಬಿಎಂಡಬ್ಲ್ಯುವಿನ ಎಲ್ಲ ಮಾದರಿಯಎಲೆಕ್ಟ್ರಿಕ್ ಕಾರುಗಳಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದುಪೌಹಾ ತಿಳಿಸಿದ್ದಾರೆ. ನೂತನಎಲೆಕ್ಟ್ರಿಕ್ ಸೆಡಾನ್ ಐ4 ಇವಿಗಳಲ್ಲಿ ಕ್ರಾಂತಿ ಮಾಡಲಿದೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.

ಎಲೆಕ್ಟ್ರಿಕ್ ಸೆಡಾನ್ ಐ4 ಬಗ್ಗೆ ಇತರೆ ಮಾಹಿತಿಗಳನ್ನು ಕಂಪನಿ ಬಿಟ್ಟುಕೊಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.