ADVERTISEMENT

ಹೊಸ ಡಾಟ್ಸನ್ ಗೋ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 19:30 IST
Last Updated 17 ಅಕ್ಟೋಬರ್ 2018, 19:30 IST
""ಡಾಟ್ಸನ್ ಗೋ
""ಡಾಟ್ಸನ್ ಗೋ   

ಡಾಟ್ಸನ್ ಈಚೆಗಷ್ಟೇ ತನ್ನ ಹ್ಯಾಚ್‌ಬ್ಯಾಕ್ 'ಗೋ'ನ ಫೇಸ್‌ಲಿಫ್ಟ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಂಪನಿಯ ಆಹ್ವಾನದ ಮೇರೆಗೆ ಇತ್ತೀಚೆಗೆ ನಡೆದ ಟೆಸ್ಟ್ ಡ್ರೈವ್ ನಲ್ಲಿ ‘ಪ್ರಜಾವಾಣಿ’ ಡಾಟ್ಸನ್ ಗೋ ಅನ್ನು ಚಲಾಯಿಸಿತ್ತು.

ಹಳೆಯ ‘ಗೋ’ ಗಿಂತ ಹೊಸ ಗೋ ಹೆಚ್ಚು ಆಕರ್ಷಕವಾಗಿದೆ. ಬಂಪರ್ ವಿನ್ಯಾಸ ಹೆಚ್ಚು ಆಕರ್ಷಕವಾಗಿದೆ. ಡೇ ಟೈಂ ರನ್ನಿಂಗ್ ಲೈಟ್ ಹೆಚ್ಚು ಪ್ರಕಾಶಮಾನವಾಗಿದ್ದು, ಕಣ್ಸೆಳೆಯುತ್ತವೆ. ಡೈಮಂಡ್ ಕಟ್ ಅಲಯ್ ವೀಲ್ ಕಾರಿನ ಚೆಂದವನ್ನು ಹೆಚ್ಚಿಸಿವೆ.

ಇಂಟೀರಿಯರ್‌ನಲ್ಲಿ ಎರಡು ಬಣ್ಣದ ಡ್ಯಾಶ್‌ಬೋರ್ಡ್ ಮತ್ತು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೊಟೈನ್‌ಮೆಂಟ್ ಸಿಸ್ಟಂ ಇದೆ. ಎರಡು ಬಣ್ಣದ ಫ್ಯಾಬ್ರಿಕ್ ಸೀಟ್‌ಗಳು ಇಂಟೀರಿಯರ್‌ನ ಅಂದವನ್ನು ಹೆಚ್ಚಿಸಿದೆ.

ADVERTISEMENT

‘ಗೋ’ನಲ್ಲಿ 1.2 ಲೀಟರ್‌ನ ಪೆಟ್ರೋಲ್ ಎಂಜಿನ್ ಇದ್ದು, ಸರಿಸುಮಾರು 800 ಕೆ.ಜಿ.ತೂಕದ ಕಾರಿಗೆ ತಕ್ಕ ಉತ್ತಮ ಶಕ್ತಿ ನೀಡುತ್ತದೆ. ಹೀಗಾಗಿ ಕಾರು ದೊಡ್ಡದಾಗಿದ್ದರೂ ಕೇವಲ 13.3 ಸೆಕೆಂಡ್‌ನಲ್ಲಿ 0–100 ಕಿ.ಮೀ.ನಷ್ಟು ವೇಗ ಪಡೆದುಕೊಳ್ಳುತ್ತದೆ. ತೂಕ ಕಡಿಮೆ ಇರುವುದರಿಂದ ಸಂಚಾರ ದಟ್ಟಣೆಯಲ್ಲಿ ಚಾಲನೆ ಸುಲಭ. ಅತ್ಯಂತ ಕಡಿಮೆ ವೇಗದಲ್ಲಿದ್ದಾಗಲೂ ಟಾಪ್‌ ಗಿಯರ್‌ನಲ್ಲಿ ಚಲಾಯಿಸಬಹುದು. ಎಲೆಕ್ಟ್ರಿಕಲ್ ಪವರ್ ಸ್ಟೀರಿಂಗ್ ಇರುವುದರಿಂದ ಕಡಿಮೆ ವೇಗದಲ್ಲಿ ಮತ್ತು ಭಾರಿ ವೇಗದಲ್ಲೂ ಚಾಲನೆ ಸುಲಭ. ಹಾಗೂ ರಸ್ತೆ ಹಿಡಿತ ಉತ್ತಮವಾಗಿದೆ. ಎಕ್ಸ್‌ ಷೋರೂಂ ಬೆಲೆ 3.3ಲಕ್ಷದಿಂದ ಆರಂಭವಾಗುತ್ತದೆ.

ಡಾಟ್ಸನ್ ಗೋ ಆಕರ್ಷಣೆಗಳು

*ಎಂಜಿನ್- 3 ಸಿಲಿಂಡರ್ ಪೆಟ್ರೋಲ್ ಎಂಜಿನ್

*ಶಕ್ತಿ- 67 ಬಿಎಚ್‌ಪಿ@5.000 ಆರ್‌ಪಿಎಂ

*ಟಾರ್ಕ್- 104 ಎನ್‌.ಎಂ@4,000 ಆರ್‌ಪಿಎಂ

*0–100 ಕಿ.ಮೀ. ವೇಗ- 13.3 ಸೆಕೆಂಡ್‌ಗಳು

*ಎಲೆಕ್ಟ್ರಿಕಲ್ ಪವರ್ ಸ್ಟೀರಿಂಗ್

*ಆಲ್ ಪವರ್ ವಿಂಡೊ

*ಚಾಲಕ ಮತ್ತು ಮುಂಬದಿಯ ಪ್ರಯಾಣಿಕರ ಏರ್‌ಬ್ಯಾಗ್

*ಡುಯಲ್ ಟೋನ್ ಡ್ಯಾಶ್‌ಬೋರ್ಡ್

*ಡುಯಲ್ಟೋನ್ ಸೀಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.