ADVERTISEMENT

ಭಾರತದಲ್ಲಿ ಜನವರಿಯಿಂದ ಡುಕಾಟಿ ಬೈಕ್‌ಗಳ ಬೆಲೆ ಹೆಚ್ಚಳ

ಪಿಟಿಐ
Published 19 ಡಿಸೆಂಬರ್ 2022, 7:17 IST
Last Updated 19 ಡಿಸೆಂಬರ್ 2022, 7:17 IST
ಡುಕಾಟಿ
ಡುಕಾಟಿ    

ಮುಂಬೈ: ಇಟಲಿ ಮೂಲದ ಸೂಪರ್‌ಬೈಕ್‌ಗಳ ತಯಾರಿಕಾ ಕಂಪನಿ ಡುಕಾಟಿಭಾರತದಲ್ಲಿ ತನ್ನ ಎಲ್ಲ ಮಾದರಿಯ ಬೈಕ್‌ಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಮುಂಬರುವ ಜನವರಿ 1ರಿಂದ ಭಾರತದಲ್ಲಿ ಡುಕಾಟಿಎಲ್ಲ ಮಾದರಿಯ ಬೈಕ್‌ಗಳ ಬೆಲೆ ಏರಲಿದೆ ಎಂದು ಕಂಪನಿಯ ಅಧಿಕೃತ ಪ್ರಕಟಣೆ ತಿಳಿಸಿದೆ.

ಆದರೆ, ಶೇ ಎಷ್ಟು ಪ್ರಮಾಣದಲ್ಲಿ ಬೆಲೆ ಏರಲಿದೆ ಎಂದು ಕಂಪನಿ ತಿಳಿಸಿಲ್ಲ. ಎಕ್ಸ್‌ ಶೋರೂಂ ಬೆಲೆಗಳ ಏರಿಕೆ ಎಲ್ಲ ಮಾದರಿಗಳಿಗೆ ಅನ್ವಯಿಸಲಿದೆ ಎಂದು ಹೇಳಿಕೆ ತಿಳಿಸಿದೆ. ಉತ್ಪಾದನಾ ವೆಚ್ಚ ಏರಿಕೆಯಿಂದ ಈ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದೆ.

ADVERTISEMENT

ಮುಂಬೈ, ನವದೆಹಲಿ, ಬೆಂಗಳೂರು, ಪುಣೆ, ಹೈದರಾಬಾದ್, ಕೋಲ್ಕತ್ತ, ಚೆನ್ನೈ, ಕೊಚ್ಚಿಯಲ್ಲಿ ಡುಕಾಟಿತನ್ನ ಶೋರೂಂಗಳನ್ನು ಹೊಂದಿದೆ.

ಅಲ್ಲದೇ ತನ್ನ ಮುಂಬರುವ ಎಲ್ಲ ಹೊಸ ಬೈಕ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುವುದು ಎಂದು ಡುಕಾಟಿತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.