ADVERTISEMENT

ವಿದ್ಯುಚ್ಛಾಲಿತ ಸ್ಕೂಟರ್ ಭರಾಟೆ | ಹೀರೊ ‘ಡ್ಯಾಶ್’ ವಿದ್ಯುತ್‌ ಸ್ಪರ್ಶ!

ನೇಸರ ಕಾಡನಕುಪ್ಪೆ
Published 2 ಸೆಪ್ಟೆಂಬರ್ 2019, 6:34 IST
Last Updated 2 ಸೆಪ್ಟೆಂಬರ್ 2019, 6:34 IST
   

ಭಾರತದಲ್ಲಿ ವಿದ್ಯುಚ್ಛಾಲಿತ ವಾಹನ ಕ್ಷೇತ್ರವನ್ನು ಹೀರೊ ಎಲೆಕ್ಟ್ರಿಕ್ ಕಂಪನಿಯು ಚೆನ್ನಾಗಿ ಅರ್ಥ ಮಾಡಿಕೊಂಡಂತಿದೆ. ಇದುವರೆಗೂ ಕಂಪನಿಯು ನಾಲ್ಕೈದುಮಾದರಿಗಳನ್ನು ಬಿಡುಗಡೆಗೊಳಿಸಿದೆ. ವಿದ್ಯುಚ್ಛಾಲಿತ ವಾಹನಗಳೆಂದರೆ ಜನಸಾಮಾನ್ಯರ ಕೈಗೆಟಕುವುದಿಲ್ಲ ಎನ್ನುವ ಮಾತಿದೆ. ಆದರೆ, ಹೀರೊ ಎಲೆಕ್ಟ್ರಿಕ್‌ ಈ ಮಾತಿಗೆವಿರುದ್ಧ ಎಂಬಂತೆ ಕಡಿಮೆ ಬೆಲೆಗೆ ವಿದ್ಯುತ್‌ ವಾಹನಗಳನ್ನು ನೀಡುತ್ತಿದೆ. ತನ್ನಲ್ಲಿರುವ ವಾಹನಗಳ ಸಾಲಿಗೆ ಇದೀಗ ‘ಹೀರೊ ಡ್ಯಾಷ್’ ಎಂಬ ಹೊಸ ಸ್ಕೂಟರ್‌ನ್ನುಬಿಡುಗಡೆಗೊಳಿಸಿದೆ.

62 ಸಾವಿರ ರೂಪಾಯಿಗೆ ಈ ಹೊಸ ವಿದ್ಯುಚ್ಛಾಲಿತ ವಾಹನ ಬಿಡುಗಡೆಗೊಂಡಿದೆ. ಲಿಥಿಯಂ ಅಯಾನ್‌ ಬ್ಯಾಟರಿ ಇರುವ, ಅತಿ ಬೇಗನೇ ಚಾರ್ಜ್‌ ಆಗುವತಂತ್ರಜ್ಞಾನವಿರುವ ಸ್ಕೂಟರ್ ಎನ್ನುವುದು ಇದರ ವಿಶೇಷ. 48 ವ್ಯಾಟ್ಸ್, 28 ಎಎಚ್‌ ಸಾಮರ್ಥ್ಯದ ಬಲಶಾಲಿ ಬ್ಯಾಟರಿ ಇರುವ ಕಾರಣ, ಕೇವಲ 4 ಗಂಟೆಗಳಲ್ಲಿಚಾರ್ಜ್‌ ಆಗುತ್ತದೆ. ಜತೆಗೆ ಕನಿಷ್ಠ 60 ಕಿಲೋಮೀಟರ್‌ ಮೈಲೇಜ್‌ ನೀಡುತ್ತದೆ. ಎಕಾನಮಿ ಮೋಡ್‌ ನಲ್ಲಿ ಸ್ಕೂಟರ್‌ ಚಾಲನೆ ಮಾಡಿದರೆ ಮತ್ತಷ್ಟು ಕಿಲೋಮೀಟರ್‌ಮೈಲೇಜ್‌ ಈ ಸ್ಕೂಟರ್‌ ನೀಡುತ್ತದೆ.

ವಿನ್ಯಾಸದಲ್ಲೂ ಮೇಲುಗೈ: ವಿದ್ಯುಚ್ಛಾಲಿತ ಸ್ಕೂಟರ್‌ಗಳೆಂದರೆ ವಿಚಿತ್ರ ವಿನ್ಯಾಸ ಹೊಂದಿರುತ್ತವೆ ಎಂಬ ಭಾವನೆ ಎಲ್ಲರಲ್ಲಿದೆ. ಈ ಹೊಸ ಸ್ಕೂಟರ್ ಈ ಭಾವನೆಗೂಬ್ರೇಕ್ ಹಾಕಿ ಉತ್ತಮ ವಿನ್ಯಾಸವನ್ನು ಹೊಂದಿದೆ. ಆಧುನಿಕ ಸ್ಪೋರ್ಟ್ಸ್ ಸ್ಕೂಟರ್‌ಗಳಿಗೆ ಇರುವ ವಿನ್ಯಾಸವನ್ನು ಸ್ಕೂಟರ್‌ ಹೊಂದಿದೆ. ಮುಂಭಾಗ ಹಾಗೂ ಹಿಂಭಾಗಎಲ್‌ಇಡಿ ದೀಪಗಳಿವೆ. ಜತೆಗೆ, ಮುಂಭಾಗದಲ್ಲಿ ‘ಡೇ ಟೈಮ್‌ ರನ್ನಿಂಗ್ ಲೈಟ್’ ಇವೆ.

ತಂತ್ರಜ್ಞಾನದಲ್ಲೂ ಸ್ಕೂಟರ್‌ ಉತ್ತಮವಾಗಿದೆ. ಸಂಪೂರ್ಣ ಡಿಜಿಟಲ್‌ ಸ್ಪೀಡೊಮೀಟರ್‌ ಹೊಂದಿದೆ. ಯುಎಸ್‌ಬಿ ಮೊಬೈಲ್ ಚಾರ್ಜಿಂಗ್ ಪೋರ್ಟ್‌ ಇದೆ. ಈಸೌಲಭ್ಯಗಳಿಂದಾಗಿ ಸ್ಕೂಟರ್‌ ಬಳಕೆದಾರ ಸ್ನೇಹಿ ಎನ್ನಿಸಿಕೊಳ್ಳುತ್ತದೆ. ಟ್ಯೂಬ್‌ ಲೆಸ್‌ ಟೈರ್‌ ಇವೆ. ಆದರೆ, ಅಲಾಯ್‌ ಚಕ್ರಗಳಿದ್ದರೂ ವಿನ್ಯಾಸ ಮಾತ್ರಸಾಮಾನ್ಯವಾಗಿದೆ. ಆದರೆ, ಇನ್ನೂ ಸುಧಾರಿತ ತಂತ್ರಜ್ಞಾನ ನೀಡಬಹುದಿತ್ತು. ಬಹುವರ್ಣ ಎಲ್‌ಸಿಡಿ ಪರದೆ, ಜಿಪಿಎಸ್‌ ಸೌಲಭ್ಯ ಇದ್ದಿದ್ದರೆ ಪ್ರೀಮಿಯಂ ವರ್ಗದ ಸ್ಕೂಟರ್‌ ಸಾಲಿಗೆ ‘ಡ್ಯಾಶ್’ ಸೇರುತ್ತಿತ್ತು.

ಡ್ಯೂಯಲ್ ಪೇಯಿಂಟ್ ಮಾದರಿ ಇದ‌ಕ್ಕಿದೆ. ಕಪ್ಪು–ಕೆಂಪು, ಬಿಳಿ– ಕೆಂಪು, ಹಸಿರು – ಕಪ್ಪು ಸೇರಿದಂತೆ ಹಲವು ಆಯ್ಕೆಗಳು ಗ್ರಾಹಕರಿಗೆ ಇವೆ. ಈ ಸ್ಕೂಟರ್‌ನಲ್ಲಿ ರಿಮೋಟ್ ಬೂಟ್ ಓಪನರ್ ಇದೆ. ಸಣ್ಣ ಗಾತ್ರದ ಹೆಲ್ಮೆ‌ಟ್ ಇಡಲು ಸೀಟಿನ ಕೆಳಗೆ ಜಾಗವಿದೆ. ಉತ್ತಮ 145 ಮಿಲಿ ಮೀಟರ್ ಗ್ರೌಂಡ್ ಕ್ಲಿಯರೆನ್ಸ್‌ ಸ್ಕೂಟರಿಗಿದೆ.

ADVERTISEMENT

ಹೀರೊ ಎಲೆಕ್ಟ್ಟಿಕ್‌ ಬಳಿ ಈಗಾಗಲೇ ಇರುವ ಲಿಥಿಯಂ ಅಯಾನ್‌ ಬ್ಯಾಟರಿ ಉಳ್ಳ ಸ್ಕೂಟರ್‌ಗಳಿಗಿಂತ ‘ಡ್ಯಾಶ್’ ಬೆಲೆ ಕಡಿಮೆ ಇದೆ. ‘ಆಪ್ಟಿಮಾ ಇಆರ್‌’ನ ಬೆಲೆಎಕ್ಸ್‌ ಶೋರೂಂನಲ್ಲಿ₹ 68,721, ಎನ್‌ವೈಎಕ್ಸ್‌ ಇಆರ್‌ನ ಬೆಲೆ ₹ 69,754 ಇದೆ. ಡ್ಯಾಷ್‌ನ ಬೆಲೆ ₹ 62,000. ಕಡಿಮೆ ದೂರ ಪಯಣಿಸುವ ಗ್ರಾಹಕರಿಗೆಇದು ಉತ್ತಮ ಆಯ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.