
ಪ್ರಜಾವಾಣಿ ವಾರ್ತೆ
ನವದೆಹಲಿ (ಪಿಟಿಐ): ವಾಹನ ಮಾರಾಟ ಕುಸಿತದಿಂದ ಕಂಗೆಟ್ಟಿರುವ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಸತತ ಏಳನೇ ತಿಂಗಳಿನಲ್ಲಿಯೂ ತನ್ನ ತಯಾರಿಕೆ ಕಡಿತಗೊಳಿಸಿದೆ.
ಆಗಸ್ಟ್‌ನಲ್ಲಿ ಶೇ 33.99ರಷ್ಟು ತಯಾರಿಕೆಯನ್ನು ಕಡಿತಗೊಳಿಸಿದ್ದು, 1,11,370 ವಾಹನಗಳನ್ನು ತಯಾರಿಸಲಾಗಿದೆ. 2018ರ ಆಗಸ್ಟ್‌ನಲ್ಲಿ ತಯಾರಾದ ವಾಹನಗಳ ಸಂಖ್ಯೆ 1,68,725 ಇತ್ತು ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.
ಜುಲೈನಲ್ಲಿ ತಯಾರಿಕೆಯನ್ನು ಶೇ 25.15ರಷ್ಟು ಕಡಿಮೆ ಮಾಡಲಾಗಿತ್ತು. ಕಂಪನಿಯ ಆಗಸ್ಟ್ ತಿಂಗಳ ಒಟ್ಟಾರೆ ಮಾರಾಟದ ಪ್ರಗತಿ ಶೇ 33ರಷ್ಟು ಇಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.