ADVERTISEMENT

70 ರೂಪದರ್ಶಿಯರ ರ‍್ಯಾಂಪ್ ವಾಕ್: ಮಿಸೆಸ್ ಸೌತ್ ಇಂಡಿಯಾ ಕಿರೀಟ ಧರಿಸಿದ ಸುಂದರಿಯರು

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 15:41 IST
Last Updated 12 ಜುಲೈ 2022, 15:41 IST
ನಗರದಲ್ಲಿ ನಡೆದ ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್ಫುಲ್ ಸ್ಪರ್ಧೆಯಲ್ಲಿ ಪ್ರಿಯಾಂಕ, ಸುವನ, ಸಿಂಧು, ಜನನಿ, ಬಬಿತಾ ಮಿಸೆಸ್ ಸೌತ್ ಇಂಡಿಯಾ ಕಿರೀಟ ಧರಿಸಿದರು. 
ನಗರದಲ್ಲಿ ನಡೆದ ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್ಫುಲ್ ಸ್ಪರ್ಧೆಯಲ್ಲಿ ಪ್ರಿಯಾಂಕ, ಸುವನ, ಸಿಂಧು, ಜನನಿ, ಬಬಿತಾ ಮಿಸೆಸ್ ಸೌತ್ ಇಂಡಿಯಾ ಕಿರೀಟ ಧರಿಸಿದರು.    

ಬೆಂಗಳೂರು: ಬೇರೆ ಬೇರೆ ಜಿಲ್ಲೆ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ದಕ್ಷಿಣ ಭಾರತದ 70 ರೂಪದರ್ಶಿಯರು ರ‍್ಯಾಂಪ್ ಮೇಲೆ ಹೆಜ್ಜೆಹಾಕಿದರು.

ಹೋಟೆಲ್ ಲಲಿತ್ ಅಶೋಕ್ ನಲ್ಲಿ ನಡೆದ ಮಿಸ್ ಹಾಗೂ ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್‌ಫುಲ್ ಫ್ಯಾಷನ್ ಶೋ ಶನಿವಾರದ ಸಂಜೆಗೆ ಸಾಕ್ಷಿಯಾಯಿತು.

ಗೌನ್ ಹಾಗೂ ಸೀರೆಯಲ್ಲಿ ಮಿಂಚಿದ ಮಿಸೆಸ್ ಹಾಗೂ ಮಿಸ್ ವಿಭಾಗದ ರೂಪದರ್ಶಿಯರಿಗೆ ಕಡಿಮೆ ಇಲ್ಲದಂತೆ ಮಿಸ್ಟರ್ ವಿಭಾಗದವರೂ ಹೆಜ್ಜೆ ಹಾಕಿ ಚಪ್ಪಾಳೆ ಗಿಟ್ಟಿಸಿಕೊಂಡರು. ಕಿಡ್ಸ್ ವಿಭಾಗದಲ್ಲಿ 50 ಮಕ್ಕಳು ರಾಂಪ್ ಮೇಲೆ ಹೆಜ್ಜೆ ಹಾಕಿದ್ದು ಈ ಬಾರಿಯ ಫ್ಯಾಷನ್ ಷೋ ನ ವಿಶೇಷತೆ.

ಇಂಟರ್ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಆಫ್ ವಾಷಿಂಗ್ಟನ್ ಸಹಯೋಗದಲ್ಲಿ ನಂದಿನಿ ನಾಗರಾಜ್ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಸೌಂದರ್ಯ ಸ್ಪರ್ಧೆ ಎಂದರೆ ತೆಳ್ಳಗೆ,ಬೆಳ್ಳಗೆ ಇರುವವರಿಗೆ ಮಾತ್ರ ಎನ್ನುವ ಮೂಡನಂಬಿಕೆಯನ್ನು ಕೈಬಿಡುವ ಉದ್ದೇಶದಿಂದ ಮಿಸೆಸ್ ಕರ್ವಿ ವಿಭಾಗವನ್ನು ಕೂಡ ಆಯೋಜಿಸಲಾಗಿತ್ತು. ಮಿಸೆಸ್ ಸೌತ್ ಇಂಡಿಯಾ ವಿಭಾಗದಲ್ಲಿ 30,ಮಿಸ್ ವಿಭಾಗದಲ್ಲಿ 20,ಮಿಸ್ಟರ್ ವಿಭಾಗದಲ್ಲಿ 20 ಸ್ಪರ್ಧಿಗಳು ಭಾಗವಹಿಸಿದರು. ಕಿಡ್ಸ್ ವಿಭಾಗದಲ್ಲಿ 50 ಮಕ್ಕಳು ರಾಂಪ್ ವಾಕ್ ಮಾಡಿದರು. ಇಲ್ಲಿ ಗೆದ್ದ ಚಿಣ್ಣರು ಅಮೆರಿಕ ದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆ ಯಲ್ಲಿ ಭಾಗವಹಿಸಲಿದ್ದಾರೆ.

ಸಾಂಪ್ರದಾಯಿಕ ಸುತ್ತಿಗೆ ರೇಷ್ಮಾ ಸಿಂಗ್ ಡಿಸೈನರ್ ಆಗಿ ಕೆಲಸ ಮಾಡಿದ್ದರೆ, ಚಂದನ್ ಗೌಡ ಹಾಗೂ ಬಕ್ಕಾಶಾಲಿ ಗೌನ್ ರೌಂಡ್ ನ ಡಿಸೈನರ್ ಆಗಿದ್ದರು. ಸ್ವರ್ಣಮಂಗಲ್ ಜ್ಯುವೆಲರಿ ಅವರ ಸಹಯೋಗ ಇತ್ತು.

ಮಿಸೆಸ್ ವಿಭಾಗದಲ್ಲಿ ಐವರನ್ನು ವಿಜೇತರನ್ನಾಗಿ ಘೋಷಿಸಲಾಯಿತು. ಮಿಸ್‌ನಲ್ಲಿ ಮೂವರು ಹಾಗೂ ಮಿಸ್ಟರ್ ವಿಭಾಗದಲ್ಲೂ ಮೂವರು ಗೆಲುವಿನ ಸಂಭ್ರಮ ಆಚರಿಸಿದರು.

ಕಾರ್ಯಕ್ರಮದ ಆಯೋಜಕಿ ನಂದಿನಿ ನಾಗರಾಜ್ ಮಾತನಾಡಿ, "ಫ್ಯಾಷನ್ ಶೋ ಎಂದರೆ ಕೇವಲ ಸೌಂದರ್ಯ ಸ್ಪರ್ದೆ ಅಲ್ಲ. ಇಲ್ಲಿ ಅವರ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶ ಇದೆ. ಮದುವೆಯಾದ ನಂತರ ಕೂಡ ತಮಗೆ ರ‍್ಯಾಂಪ್ ಮೇಲೆ ಹೆಜ್ಜೆಹಾಕುವ ಅವಕಾಶ ಸಿಕ್ಕಿದ್ದಕ್ಕೆ ಮಿಸೆಸ್ ವಿಭಾಗದ ಸ್ಪರ್ಧಿಗಳು ಸಂಭ್ರಮಿಸುತ್ತಾರೆ. ನಾನು ಅವರಿಗೆಲ್ಲಾ ಅಭಿನಂದನೆ ಹೇಳಲೇಬೇಕು’ಎಂದರು.

ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್‌ಫುಲ್‌ನಲ್ಲಿ ಗೆದ್ದ ಸ್ಪರ್ಧಿಗಳು ಗೋವಾ ದಾಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ ಗೆದ್ದವರು ಸಿಂಗಪೂರದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.