ADVERTISEMENT

ಸೌಂದರ್ಯ: ಬಿಸಿಲಿಗೆ ಮೇಕಪ್ ಹೀಗಿರಲಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2023, 19:30 IST
Last Updated 14 ಏಪ್ರಿಲ್ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಿಸಿಲ ಧಗೆ ಹೆಚ್ಚುತ್ತಿದೆ. ಬೇಸಿಗೆ ಬಂತೆಂದರೆ ಸೆಕೆಯ ನಡುವೆ ಸಮಾರಂಭಗಳ ಸರಮಾಲೆ ಆರಂಭವಾಗುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ಮಾಡಿದಷ್ಟೇ ಹಾಕಿಕೊಳ್ಳುವ ಮೇಕಪ್‌ ಬಗ್ಗೆಯೂ ಎಚ್ಚರ ವಹಿಸಬೇಕು.

ಬೇಸಿಗೆಯಲ್ಲಿ ಅತಿಯಾಗಿ ಬೆವರುವುದರಿಂದ ಢಾಳವಾದ ಮೇಕಪ್‌ನಿಂದ ದೂರವಿರಿ. ಚರ್ಮದ ಆರೈಕೆಗೆ ನೀರಿನ ಸೇವನೆ, ಪೌಷ್ಟಿಕಯುಕ್ತ ಆಹಾರ ಸೇವನೆ ಅಗತ್ಯ. ಜತೆಗೆ ಆದಷ್ಟು ಬಿಸಿಲಿಗೆ ಮೈ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ಹೊರಗೆ ಹೋಗಲೇಬೇಕು ಎಂದರೆ ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಿ.

ಸನ್‌ಸ್ಕ್ರೀನ್‌ ಬಳಕೆ ಇರಲಿ: ತುಂಬಾ ಹೊತ್ತು ಬಿಸಿಲಿನಲ್ಲಿ ಇರುವುದರಿಂದ ಚರ್ಮ ಸುಟ್ಟ ಅನುಭವ ಆಗುತ್ತದೆ. ಒಮ್ಮೆ ಸನ್‌ ಟ್ಯಾನ್‌ ಆದರೆ, ಅದರಿಂದ ಕೆಲವೊಮ್ಮೆ ಸುಲಭವಾಗಿ ಹೊರಬರಲು ಸಾಧ್ಯವಿಲ್ಲ. ಹಾಗಾಗಿ ಉತ್ತಮ ಸನ್‌ಸ್ಕ್ರೀನ್‌ ಲೋಷನ್‌ ಬಳಸುವುದನ್ನು ತಪ್ಪಿಸದಿರಿ. ಎಸ್‌ಪಿಎಫ್‌ 30 ( ಸನ್‌ ಪ್ರೊಟೆಕ್ಷನ್‌ ಫ್ಯಾಕ್ಟರ್‌ 30) ಇದಕ್ಕಿಂ ತಲೂ ಅಧಿಕವಿರುವ ಸನ್‌ಸ್ಕ್ರೀನ್‌ ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಎಲ್ಲ ಬಗೆಯ ಚರ್ಮ ಗಳಿಗೂ ಹೊಂದುವಂಥ ಸನ್‌ಸ್ಕ್ರೀನ್‌ ಕ್ರೀಮ್ ಆಯ್ಕೆ ಮಾಡಿಕೊಳ್ಳಿ.

ADVERTISEMENT

ಬೇಸಿಗೆ ಆಕ್ಸೆಸರಿಸ್ ಬಳಸಿ: ಶಾಲೆ ರಜೆ ಇರುವುದರಿಂದ ಮಕ್ಕಳ ಜತೆ ಸೇರಿ ಕಾಡು–ಮೇಡು, ಶಿಖರ, ಸಮುದ್ರ ಸುತ್ತಲೂ ಹೋಗುವುದು ಸಾಮಾನ್ಯ. ಇಂಥ ವೇಳೆ ಆದಷ್ಟು ಕಾಟನ್‌ ಬಟ್ಟೆಗಳ ಜತೆ ತಲೆಗೆ ಹ್ಯಾಟ್‌ ಧರಿಸುವುದನ್ನು ಮರೆಯಬೇಡಿ. ಅತಿಯಾಗಿ ಬಿಸಲಿಗೆ ಒಡ್ಡಿಕೊಳ್ಳುವುದರಿಂದ ತಲೆಬೇನೆ ಕಾಡಬಹುದು. ಮುಖಕ್ಕೂ, ತಲೆಗೂ ರಕ್ಷಣೆ ನೀಡುವಂಥ ಟೊಪ್ಪಿಗಳನ್ನು ಬಳಸಿ. ಈ ಟೊಪ್ಪಿಗಳ ಫ್ಯಾಬ್ರಿಕ್‌ ಕಾಟನ್‌ ಅಥವಾ ಲಿನಿನ್‌ ಆಗಿರಲಿ.

ಆಗಾಗ ಮುಖ ತೊಳೆಯಿರಿ: ಬಿಸಿಲ ತಾಪಕ್ಕೆ ಸೆಕೆ ಬೊಕ್ಕೆಗಳಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಆಗಾಗ ನೀರಿನಲ್ಲಿ ಮುಖ ತೊಳೆಯುತ್ತಿರಿ. ಸಾಧ್ಯವಾದರೆ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ. ಇದರಿಂದ ಸೆಕೆ ಬೊಕ್ಕೆಯಾಗುವುದನ್ನು ತಪ್ಪಿಸಬಹುದು. ಜತೆಗೆ ದೇಹವನ್ನು ತಂಪಾಗಿಡುವ ಮೂಲಕ ಬೊಕ್ಕೆ ಆಗುವುದನ್ನು ತಪ್ಪಿಸಬಹುದು.

ಮಿತವಾದ ಮೇಕಪ್‌: ಮೇಕಪ್‌ ಮಿತವಾಗಿರಲಿ. ವಿಟಮಿನ್‌ ಸಿ ಅಂಶವಿರುವ ಸಿರಮ್ ಹೆಚ್ಚುಬಳಸಿ. ಇದು ಎಲ್ಲ ಕಾಲಕ್ಕೂ ತ್ವಚೆಯನ್ನು ಕಾಪಿಡಬಲ್ಲದು. ಉತ್ತಮ ಗುಣಮಟ್ಟದ ಕ್ಲೆನ್ಸರ್‌ ಹಾಗೂ ಮಾಯ್ಚಿರೈಸರ್ ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.