ನವದೆಹಲಿ (ಪಿಟಿಐ): ಚಂಡಮಾರುತದಿಂದ ಆಗಿರುವ ಬೆಳೆ ಹಾನಿಯಿಂದಾಗಿ ಭಾರತದ ಅಕ್ಕಿ ಉತ್ಪಾದನೆ 2013–14ನೇ ಸಾಲಿನಲ್ಲಿ 10.30 ಕೋಟಿ ಟನ್ ಗಳಿಗೆ ಇಳಿಕೆ ಕಾಣಬಹುದು, ಇದರಿಂದ ರಫ್ತು ಕೂಡ 1 ಕೋಟಿ ಟನ್ಗಳಿಗಿಂತ ಕಡಿಮೆ ಇರಲಿದೆ ಎಂದು ಅಮೆರಿಕದ ಕೃಷಿ ಇಲಾಖೆಯ (ಯುಎಸ್ಡಿಎ) ಇತ್ತೀ ಚಿನ ವರದಿ ಹೇಳಿದೆ.
ಭತ್ತ ಕಟಾವಿಗೆ ಬಂದ ಸಂದರ್ಭದಲ್ಲಿ ಭಾರಿ ಮಳೆ ಆಗಿರುವುದರಿಂದ ಒಟ್ಟಾರೆ ಉತ್ಪಾದನೆ ಗಣನೀಯವಾಗಿ ಕುಸಿಯುವ ಸಾಧ್ಯತೆ ಇದೆ. ಚಂಡಮಾರುತದಿಂದ ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿ ಆಗಿದೆ ಎಂದು ‘ಯುಎಸ್ಡಿಎ’ ಹೇಳಿದೆ.
2011–12ನೇ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ 10.53 ಕೋಟಿ ಟನ್ಅಕ್ಕಿ ಉತ್ಪಾದನೆ ಆಗಿತ್ತು. 2012–13ರಲ್ಲಿ ಇದು ಅಲ್ಪ ಕುಸಿತ ಕಂಡು 10.44 ಕೋಟಿ ಟನ್ಗಳಿಗೆ ಇಳಿದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.