ADVERTISEMENT

‘ಅಪೆಕ್ಸ್‌ ಬ್ಯಾಂಕ್‌ ನಿವ್ವಳ ಮೌಲ್ಯ ₹ 1,010.83 ಕೋಟಿ’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 19:30 IST
Last Updated 20 ಅಕ್ಟೋಬರ್ 2017, 19:30 IST

ಬೆಂಗಳೂರು: ‘ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ ಆರ್ಥಿಕವಾಗಿ ಸದೃಢವಾಗಿದ್ದು, ಬ್ಯಾಂಕಿನ ನಿವ್ವಳ ಮೌಲ್ಯ₹ 1,010.83 ಕೋಟಿ’ ಎಂದು
ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ರೈತರ ಸಾಲ ಮನ್ನಾ ಹೊರೆ ಹೊಂದಿಸಲು ಮೈಸೂರು ಮಿನರಲ್ಸ್‌ (ಎಂಎಂಎಲ್‌)ನಿಂದ ₹ 1400 ಕೋಟಿಯನ್ನು ಅಪೆಕ್ಸ್ ಬ್ಯಾಂಕಿನಲ್ಲಿ ಠೇವಣಿ ಇಡಲು ನಿರ್ಧರಿಸಲಾಗಿದೆ.

ಸಾರ್ವಜನಿಕ ಉದ್ದಿಮೆಗಳ ಇಲಾಖೆ ಸುತ್ತೋಲೆಯ ಪ್ರಕಾರ, ಠೇವಣಿಇಡಲು ನಿವ್ವಳ ಮೌಲ್ಯ ₹ 500 ಕೋಟಿಗೂ ಹೆಚ್ಚು ಇರಬೇಕು. ಅಪೆಕ್ಸ್‌ ಬ್ಯಾಂಕಿನ ನಿವ್ವಳ ಮೌಲ್ಯ ಕಡಿಮೆ ಇರುವುದರಿಂದ ಠೇವಣಿ ಇಡಲು ಅವಕಾಶ ಇಲ್ಲ ಎಂದು ಎಂಎಂಎಲ್‌ ಮಂಡಳಿ ವರದಿಯಲ್ಲಿ
ಉಲ್ಲೇಖಿಸಲಾಗಿತ್ತು.

ADVERTISEMENT

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ‘ಅಪೆಕ್ಸ್‌ಬ್ಯಾಂಕು ರಾಜ್ಯದ ಏಕೈಕ ಷೆಡ್ಯೂಲ್ಡ್‌ ಸಹಕಾರಿ ಬ್ಯಾಂಕ್‌ ಆಗಿದೆ.
ಲೆಕ್ಕ ಪರಿಶೋಧಕರು ದೃಢೀಕರಿಸಿದ 2016–17ನೇ ಸಾಲಿನ ಆರ್ಥಿಕ ವಹಿವಾಟು ವರದಿಯಲ್ಲಿ ನಿವ್ವಳ ಮೌಲ್ಯದ ಬಗ್ಗೆ ಉಲ್ಲೇಖ ಇದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.