
ಪ್ರಜಾವಾಣಿ ವಾರ್ತೆನವದೆಹಲಿ (ಪಿಟಿಐ): 2012-13ನೇ ಸಾಲಿನ ಬಜೆಟ್‌ನಲ್ಲಿ ಅಬಕಾರಿ ಸುಂಕ ಮತ್ತು ಸೇವಾ ತೆರಿಗೆಯಲ್ಲಿ ಈಗಿನ ಯಥಾಸ್ಥಿತಿ (ಶೇ 10) ಕಾಯ್ದುಕೊಳ್ಳುವಂತೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಆಗ್ರಹಿಸಿದೆ.
ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಗೆ ಬಜೆಟ್ ಪೂರ್ವ ಮನವಿ ಸಲ್ಲಿಸಿರುವ `ಅಸೋಚಾಂ~, ಕೇಂದ್ರ ಮಾರಾಟ ತೆರಿಗೆಯನ್ನು (ಸಿಎಸ್‌ಟಿ) ಈಗಿನ ಶೇ 2ರಿಂದ ಶೇ 1ಕ್ಕೆ ಇಳಿಸಬೇಕು ಎಂದೂ ಒತ್ತಾಯಿಸಿದೆ.
ಕೇಂದ್ರ ಮೌಲ್ಯ ವರ್ಧಿತ ತೆರಿಗೆ (ಸಿಇಎನ್-ವ್ಯಾಟ್) ಮರು ಜಾರಿಯಿಂದ ಹೊಸ ಹೂಡಿಕೆಗಳಿಗೆ ಉತ್ತೇಜನ ಲಭಿಸಲಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.