ADVERTISEMENT

ಅಮೆರಿಕದ ಸರಕಿಗೆ ಸುಂಕ ಹೆಚ್ಚಿಸಲು ಭಾರತ ಚಿಂತನೆ

ಪಿಟಿಐ
Published 20 ಮೇ 2018, 19:30 IST
Last Updated 20 ಮೇ 2018, 19:30 IST
ಅಮೆರಿಕದ ಸರಕಿಗೆ ಸುಂಕ  ಹೆಚ್ಚಿಸಲು ಭಾರತ ಚಿಂತನೆ
ಅಮೆರಿಕದ ಸರಕಿಗೆ ಸುಂಕ ಹೆಚ್ಚಿಸಲು ಭಾರತ ಚಿಂತನೆ   

ನವದೆಹಲಿ: ಅಮೆರಿಕದಿಂದ ಆಮದು ಮಾಡಿಕೊಳ್ಳುವ 20 ಸರಕುಗಳ ಮೇಲೆ ದುಬಾರಿ ಸುಂಕ ವಿಧಿಸಲು ಆಲೋಚಿಸುತ್ತಿರುವುದಾಗಿ ಭಾರತವು ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) ಗಮನಕ್ಕೆ ತಂದಿದೆ.

ಅಮೆರಿಕವು ತನ್ನ ಉಕ್ಕು ಮತ್ತು ಅಲ್ಯುಮಿನಿಯಂ ಸರಕುಗಳ ಮೇಲೆ ಆಮದು ಸುಂಕ ಹೆಚ್ಚಿಸಿರುವುದಕ್ಕೆ ಪ್ರತೀಕಾರಾರ್ಥ, ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ದುಬಾರಿ ಸುಂಕ ವಿಧಿಸಲು ನಿರ್ಧರಿಸಿರುವುದಾಗಿ ಭಾರತ ತಿಳಿಸಿದೆ.

ಬಾದಾಮಿ, ಸೇಬುಹಣ್ಣು, ಶುದ್ಧೀಕರಿಸಿದ ಪಾಮೊಲಿನ್‌ ತೈಲ, ಚಾಕಲೇಟ್‌ ಉತ್ಪನ್ನ, ಗಾಲ್ಫ್‌ ಕಾರ್‌, ಮತ್ತು ಮೋಟರ್‌ ಸೈಕಲ್‌ಗಳ ಮೇಲೆ ಹೆಚ್ಚುವರಿಯಾಗಿ ಶೇ 5ರಿಂದ ಶೇ 100ರಷ್ಟು ಸುಂಕ ಹೆಚ್ಚಿಸಲು ಭಾರತ ಉದ್ದೇಶಿಸಿದೆ.

ADVERTISEMENT

ಅಮೆರಿಕದ ಸರಕುಗಳ ಆಮದಿಗೆ ನೀಡಲಾಗುತ್ತಿರುವ ರಿಯಾಯ್ತಿಗಳನ್ನು ರದ್ದುಪಡಿಸಿ ಸುಂಕ ಹೆಚ್ಚಿಸಲು ನಿರ್ಧರಿಸಿದೆ.

ಅಮೆರಿಕೆಗೆ ಮನವಿ: ಆಮದು ಸುಂಕ ವಿಧಿಸುವುದರಿಂದ ತನ್ನ ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳಿಗೆ ವಿನಾಯ್ತಿ ನೀಡಬೇಕು ಎಂದು ಭಾರತ ಈಗಾಗಲೇ ಅಮೆರಿಕೆಗೆ ಮನವಿ ಮಾಡಿಕೊಂಡಿದೆ.

ಅಮೆರಿಕವು ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳ ಆಮದಿನ ಮೇಲೆ ಶೇ 25 ಮತ್ತು ಶೇ 10ರಷ್ಟು ಸುಂಕ ವಿಧಿಸಲು ಮುಂದಾಗಿದೆ. ಅಮೆರಿಕದ ಈ ಕ್ರಮವು ಜಾಗತಿಕ ವ್ಯಾಪಾರ ನಿಯಮಗಳಿಗೆ ವಿರುದ್ಧವಾಗಿವೆ ಎಂದು ನಿಲುವು ತಳೆದಿರುವ ಭಾರತ, ಟ್ರಂಪ್‌ ಆಡಳಿತದ ಈ ನಿರ್ಧಾರದ ವಿರುದ್ಧ  ಈಗಾಗಲೇ ‘ಡಬ್ಲ್ಯುಟಿಒ’ಕ್ಕೆ ದೂರು ಸಲ್ಲಿಸಿದೆ.

**

ತಪ್ಪಿದ ವಾಣಿಜ್ಯ ಸಮರ

ವಾಷಿಂಗ್ಟನ್‌:  ತಮ್ಮ ಮಧ್ಯೆ ಉದ್ಭವಿಸಿದ್ದ ವಾಣಿಜ್ಯ ಸಮರ ತಪ್ಪಿಸಲು ಅಮೆರಿಕ ಮತ್ತು ಚೀನಾ ಮುಂದಾಗಿವೆ.

ಈ ಸಂಬಂಧ ಎರಡೂ ದೇಶಗಳು ಒಪ್ಪಂದಕ್ಕೆ ಬಂದಿವೆ. ಅಮೆರಿಕದಿಂದ ಖರೀದಿಸುವ ಸರಕುಗಳ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಲು ಚೀನಾ ಮುಂದಾಗಿದೆ. ಅಮೆರಿಕದ ಜತೆಗಿನ ವ್ಯಾ‍ಪಾರ ಕೊರತೆಯನ್ನು ₹ 25.12 ಲಕ್ಷ ಕೋಟಿಗೆ ಇಳಿಸಲು ಸಮ್ಮತಿಸಿದೆ.

ಇಲ್ಲಿ ನಡೆದ ಸಂಧಾನ ಮಾತುಕತೆ ಕೊನೆಯಲ್ಲಿ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ, ಪರಸ್ಪರ ವಾಣಿಜ್ಯ ಸಮರ ನಡೆಸದಿರಲು ನಿರ್ಧರಿಸಿರುವುದನ್ನು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.