ADVERTISEMENT

ಅಲ್ಪಾವಧಿ ಸಾಲಕ್ಕೆ ಏರ್‌ ಇಂಡಿಯಾ ಸಿದ್ಧತೆ

ಪಿಟಿಐ
Published 9 ಡಿಸೆಂಬರ್ 2017, 19:44 IST
Last Updated 9 ಡಿಸೆಂಬರ್ 2017, 19:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ನಷ್ಟದಲ್ಲಿರುವ ಏರ್‌ ಇಂಡಿಯಾ ಸಂಸ್ಥೆಯ ದುಡಿಯುವ ಬಂಡವಾಳಕ್ಕಾಗಿ, ಅಲ್ಪಾವಧಿಗೆ ₹ 1,500 ಕೋಟಿ ಸಾಲ ಪಡೆಯಲು ಮುಂದಾಗಿದೆ.

ಉದ್ದೇಶಿತ ಸಾಲ ಪಡೆಯಲು ಸಂಸ್ಥೆಯು  ಸರ್ಕಾರದ ಖಾತರಿಗಾಗಿ ಎದುರು ನೋಡುತ್ತಿದೆ ಎಂದು ಬಿಡ್‌ಗಾಗಿ ಸಲ್ಲಿಸಿರುವ ದಾಖಲೆ ಪತ್ರದಲ್ಲಿ ಹೇಳಲಾಗಿದೆ.

ಸಾಲ ನೀಡಲು ಆಸಕ್ತಿ ಇರುವ ಬ್ಯಾಂಕ್‌ಗಳು ಡಿಸೆಂಬರ್ 12ರ ಒಳಗಾಗಿ ಬಿಡ್‌ ಸಲ್ಲಿಸಬೇಕು. ಅದರಲ್ಲಿ ಸಾಲದ ಮೊತ್ತವನ್ನೂ ನಮೂದಿಸಿರಬೇಕು. ಸಾಲ ಮರುಪಾವತಿ ಅವಧಿಯನ್ನು  2018ರ ಜೂನ್‌ಗೆ ನಿಗದಿ ಮಾಡಲಾಗಿದೆ. ಅವಧಿ ವಿಸ್ತರಣೆ ಮಾಡುವ ಸಾಧ್ಯತೆಯೂ ಇದೆ.

ADVERTISEMENT

ಏರ್‌ ಇಂಡಿಯಾ ₹ 52,000 ಕೋಟಿ ಸಾಲ ಬಾಕಿ ಉಳಿಸಿಕೊಂಡಿದೆ. ಹೀಗಾಗಿ 2032ರವರೆಗೆ ಏರ್‌ಇಂಡಿಯಾಗೆ  ₹ 50 ಸಾವಿರ ಕೋಟಿ ಬಂಡವಾಳ ನೆರವು ನೀಡುವುದಾಗಿ ಹಿಂದಿನ ಯುಪಿಎ ಸರ್ಕಾರ ಭರವಸೆ ನೀಡಿತ್ತು. ಇದರಲ್ಲಿ ಸರ್ಕಾರ ಈಗಾಗಲೇ ₹ 24,000 ಕೋಟಿ ನೀಡಿದೆ. ಇನ್ನುಳಿದ ಮೊತ್ತವನ್ನು ಷೇರು ವಿಕ್ರಯದ ಮೂಲಕ ನೀಡಲಿದೆ.

ಏರ್‌ ಇಂಡಿಯಾ ಮತ್ತು ಅದರ ಐದು ಅಂಗ ಸಂಸ್ಥೆಗಳ ಷೇರು ವಿಕ್ರಯ ಮಾಡಲು ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದ ಸಚಿವರ ತಂಡ ಷೇರು ವಿಕ್ರಯದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.