ADVERTISEMENT

ಅಲ್ಯುಮಿನಿಯಂ ಅಗ್ಗ: ಉಕ್ಕು ತುಟ್ಟಿ

ಲೋಹ ಧಾರಣೆಯಲ್ಲಿ ಏರಿಳಿತ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 19:59 IST
Last Updated 3 ಏಪ್ರಿಲ್ 2013, 19:59 IST

ಭುವನೇಶ್ವರ (ಐಎಎನ್‌ಎಸ್):  ಸರ್ಕಾರಿ ಸ್ವಾಮ್ಯದ `ನ್ಯಾಷನಲ್ ಅಲ್ಯುಮಿನಿಯಂ ಕಂಪೆನಿ'(ಎನ್‌ಎಎಲ್‌ಸಿಒ) ದೇಶೀಯ ಮಾರುಕಟ್ಟೆಯಲ್ಲಿ ಅಲ್ಯುಮಿನಿಯಂ ದರವನ್ನು ಪ್ರತಿ ಟನ್‌ಗೆ ರೂ.3 ಸಾವಿರದಷ್ಟು ತಗ್ಗಿಸಿದೆ.

ಲಂಡನ್ ಲೋಹ ವಿನಿಮಯ ಕೇಂದ್ರದ ದರ ಇಳಿಕೆಯಿಂದಾಗಿ ಕಂಪೆನಿ ಇತ್ತೀಚೆಗೆ ಮೂರು ಬಾರಿ ಅಲ್ಯುಮಿನಿಯಂ ದರ ಪರಿಷ್ಕರಣೆ ಮಾಡಿದಂತಾಗಿದೆ. ಮಾರ್ಚ್ 1ರಂದು ರೂ.2,000 ಮತ್ತು ಮಾ. 22ರಂದು ರೂ.6,500 ಇಳಿಕೆ ಮಾಡಿತ್ತು. `ನಾಲ್ಕೊ' ದೇಶದ ಮೂರನೇ ಅತಿ ದೊಡ್ಡ ಅಲ್ಯುಮಿನಿಯಂ ತಯಾರಿಕಾ ಕಂಪೆನಿ ಆಗಿದ್ದು, 2012-13ನೇ ಸಾಲಿನಲ್ಲಿ  ವಾರ್ಷಿಕ 4.03 ಲಕ್ಷ ಟನ್ ಅಲ್ಯುಮಿನಿಯಂ ಉತ್ಪಾದಿಸಿದೆ.

ಉಕ್ಕು ತುಟ್ಟಿ
ನವದೆಹಲಿ(ಪಿಟಿಐ):
  ಆಮದು ಮಾಡಿಕೊಳ್ಳುವ ಕಚ್ಚಾ ಸರಕುಗಳು ದುಬಾರಿ ಆಗಿರುವುದರಿಂದ ಉಕ್ಕಿನ ಬೆಲೆಯನ್ನು ಪ್ರತಿ ಟನ್‌ಗೆ ರೂ.1,400ದಷ್ಟು ಹೆಚ್ಚಿಸುವುದಾಗಿ ದೇಶದ ಪ್ರಮುಖ ಉಕ್ಕು ತಯಾರಿಕಾ ಕಂಪೆನಿಗಳು ಬುಧವಾರ ಹೇಳಿವೆ.

ಉಕ್ಕಿನ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶೇ 3ರಿಂದ ಶೇ 4ರಷ್ಟು  ಹೆಚ್ಚಿಸಲಾಗುವುದು ಎಂದು  ಪ್ರಮುಖ ಕಂಪೆನಿಯೊಂದು ಹೇಳಿದೆ.  ರೈಲ್ವೆ ಸರಕು ಸಾಗಾಟದ ದರವನ್ನು ಹೆಚ್ಚಿಸಿರುವುದರಿಂದ ಪ್ರತಿ ಟನ್ ಉಕ್ಕು ಸಾಗಣೆಗೆ ಕಂಪೆನಿಗಳು ಹೆಚ್ಚುವರಿಯಾಗಿ ರೂ.60 ಪಾವತಿಸಬೇಕಿದೆ.
ಭಾರತೀಯ ಉಕ್ಕು ಪ್ರಾಧಿಕಾರ   (ಎಸ್‌ಎಐಎಲ್) ಜಿಂದಾಲ್ ಸ್ಟೀಲ್ ಅಂಡ್ ಪವರ್ (ಜೆಎಸ್‌ಪಿಎಲ್) ಕಳೆದ ತಿಂಗಳು ಉಕ್ಕು ಬೆಲೆ ಏರಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.