ADVERTISEMENT

ಆನ್‌ಲೈನ್ ಮಳಿಗೆ ಆರಂಭ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಬೆಂಗಳೂರು: ನಗರದ ಮೊಟ್ಟ ಮೊದಲ ಆನ್‌ಲೈನ್ ಕಿರಾಣಿ ಅಂಗಡಿ `ಬಿಗ್‌ಬಾಸ್ಕೆಟ್‌ಡಾಟ್‌ಕಾಮ್~ (Bigba­sket.com) ಆರಂಭಗೊಂಡಿದೆ. ಈ `ಇ-ದಿನಸಿ~ ಮಳಿಗೆಯಲ್ಲಿ ಎಲ್ಲ ಬಗೆಯ ಸರಕುಗಳೂ  ಖರೀದಿಗೆ ಲಭ್ಯವಾಗಲಿವೆ.

ಮನೆಗೆ ಸರಕು ತಲುಪಿಸಿದ ನಂತರ ಹಣ ಪಾವತಿಸುವ, ಮತ್ತು ದಿನದ ಯಾವ ಸಮಯದಲ್ಲಿ ಸರಕು ಮನೆಗೆ ತಲುಪಿಸುವ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಲಾಗಿದೆ.  ಇದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ದೊರೆಯಲಿದೆ ಎಂದು ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.