ADVERTISEMENT

ಆರ್‌ಕಾಂ: ಟ್ಯಾಬ್ಲೆಟ್ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

ಬೆಂಗಳೂರು: ಮೊಬೈಲ್ ಸೇವಾ ಸಂಸ್ಥೆ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಂ), ಸಿಡಿಎಂಎ  ಬಳಕೆದಾರರಿಗಾಗಿ `ರಿಲಯನ್ಸ್ ಸಿಡಿಎಂಎ ಟ್ಯಾಬ್~ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಕಳೆದ ವರ್ಷ ಪರಿಚಯಿಸಿದ್ದ ರಿಲಯನ್ಸ್ 3ಜಿ ಟ್ಯಾಬ್‌ನ ಯಶಸ್ಸಿನಿಂದ ಉತ್ತೇಜನಗೊಂಡಿರುವ ಸಂಸ್ಥೆಯು ಈಗ ದೇಶದ ಮೊದಲ ಸಿಡಿಎಂಎ ಟ್ಯಾಬ್ ಬಿಡುಗಡೆ ಮಾಡಿದೆ ಎಂದು ಸಂಸ್ಥೆಯ ಬ್ರಾಂಡ್ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಂಜಯ್ ಭೇಲ್ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ `ಸಿಡಿಎಂಎ ಟ್ಯಾಬ್~ 7 ಇಂಚುಗಳ ಸ್ಪರ್ಶ ಪರದೆ, ಮೊಬೈಲ್ ಟಿವಿ ಆಂಡ್ರಾಯ್ಡ ಅಪ್ಲಿಕೇಷನ್ ಮತ್ತಿತರ ಸೌಲಭ್ಯ ಒಳಗೊಂಡಿದೆ. ಇದರ ಬೆಲೆ    ರೂ. 12,999 ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT