
ಪ್ರಜಾವಾಣಿ ವಾರ್ತೆ
ಮುಂಬೈ (ಪಿಟಿಐ): ಮೂರು ವರ್ಷಗಳ ತರುವಾಯ ಇದೇ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರವನ್ನು ಶೇಕಡ 0.50 ರಷ್ಟು ಕಡಿತ ಮಾಡಿದ್ದು, ಇದರಿಂದ ಗೃಹ, ಆಟೋಮೊಬೈಲ್ ಹಾಗೂ ಕಾರ್ಪೋರೆಟ್ ಸಾಲಗಳು ಸುಲಭ ದರದಲ್ಲಿ ಲಭ್ಯವಾಗಲಿವೆ.
ಮಂಗಳವಾರ ವಾರ್ಷಿಕ ಹಣಕಾಸು ನೀತಿ ಬಿಡುಗಡೆ ಮಾಡಿ ಮಾತನಾಡಿದ ಆರ್‌ಬಿಐನ ಗವರ್ನರ್ ಡಿ.ಸುಬ್ಬರಾವ್ ಅವರು ~ದೇಶದ ಆರ್ಥಿಕತೆ ಚೇತರಿಕೆಗೆ ಹಾಗೂ 2008ರ ಜಾಗತೀಕ ಆರ್ಥಿಕ ಬಿಕ್ಕಟ್ಟಿಗೆ ಮುಂಚಿನ ಶೇಕಡ 9ರ ಬೆಳವಣಿಗೆ ದರವನ್ನು ಪುನಃ ಉತ್ತೇಜಿಸುವ ಉದ್ದೇಶದಿಂದ ರಿಪೋ ದರ ಇಳಿಕೆ ಮಾಡಲಾಗಿದೆ~ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.