ADVERTISEMENT

ಇಂದು ಬಂಧನ್ ಬ್ಯಾಂಕ್‌ನ ಐಪಿಒ

ಪಿಟಿಐ
Published 14 ಮಾರ್ಚ್ 2018, 19:30 IST
Last Updated 14 ಮಾರ್ಚ್ 2018, 19:30 IST

ಬೆಂಗಳೂರು: ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗೆ ಹಣಕಾಸಿನ ನೆರವು ನೀಡುವ ಬಂಧನ್‌ ಬ್ಯಾಂಕ್‌. ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಗುರುವಾರ ಷೇರುಪೇಟೆ ಪ್ರವೇಶಿಸಲಿದೆ.

‘10ರ ಮುಖಬೆಲೆಯ 11.9 ಕೋಟಿ ಷೇರುಗಳನ್ನು ಬಿಡುಗಡೆ ಮಾಡಲಾಗುವುದು. ಐಪಿಒ ಬಿಡ್‌ ಸಲ್ಲಿಕೆ ಅವಧಿ ಮಾರ್ಚ್‌ 19ಕ್ಕೆ ಕೊನೆಗೊಳ್ಳಲಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಚಂದ್ರಶೇಖರ್‌ ಘೋಷ್‌ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಷೇರಿನ ಬೆಲೆ ₹ 370 ರಿಂದ
₹ 375ರವರೆಗೆ ನಿಗದಿ ಮಾಡಲಾಗಿದೆ. ಕನಿಷ್ಠ 40 ಷೇರುಗಳಿಗೆ ಮತ್ತು 40ರ ಗುಣಕದಲ್ಲಿ ಬಿಡ್‌ ಸಲ್ಲಿಸಲು ಅವಕಾಶ ಇದೆ.

ADVERTISEMENT

ಅರ್ಹ ಸಾಂಸ್ಥಿಕ ಖರೀದಿದಾರರಿಗೆ ಶೇ 50 ರಷ್ಟು, ಸಾಂಸ್ಥಿಕೇತರ ಖರೀದಿದಾರರಿಗೆ ಶೇ 15 ರಷ್ಟು, ಚಿಲ್ಲರೆ ಹೂಡಿಕೆದಾರರಿಗೆ ಶೇ 35 ರಷ್ಟು ಷೇರು ಖರೀದಿ ಆಯ್ಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.