ADVERTISEMENT

ಇನ್ಫಿಗೆ ಎಸ್‌ಇಜೆಡ್ ಸೌಲಭ್ಯ ಇಲ್ಲ- ಮಮತಾ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 19:30 IST
Last Updated 2 ಮಾರ್ಚ್ 2012, 19:30 IST
ಇನ್ಫಿಗೆ ಎಸ್‌ಇಜೆಡ್ ಸೌಲಭ್ಯ ಇಲ್ಲ- ಮಮತಾ ಸ್ಪಷ್ಟನೆ
ಇನ್ಫಿಗೆ ಎಸ್‌ಇಜೆಡ್ ಸೌಲಭ್ಯ ಇಲ್ಲ- ಮಮತಾ ಸ್ಪಷ್ಟನೆ   

ಕೋಲ್ಕತ್ತ (ಐಎಎನ್‌ಎಸ್): ಇನ್ಫೋಸಿಸ್ ಸಂಸ್ಥೆಗೆ ರಾಜ್ಯದಲ್ಲಿ ಘಟಕ ಆರಂಭಿಸಲು ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ, ಇದನ್ನು ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್) ಸ್ಥಾನಮಾನ ಎಂದು ಕರೆಯಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಸ್ಪಷ್ಟಪಡಿಸಿದ್ದಾರೆ.

ಬಲವಂತದ ಭೂಸ್ವಾಧೀನ ಮತ್ತು ವಿಶೇಷ ಆರ್ಥಿಕ ವಲಯಕ್ಕೆ  ನಾವು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಈಗಲೂ ಅದಕ್ಕೆ ಬದ್ಧರಾಗಿದ್ದೇವೆ. ಆದರೆ, ಇನ್ಫೋಸಿಸ್ ಘಟಕ ಪ್ರಾರಂಭಿಸುವುದಕ್ಕೆ ನಾವು ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದು ಅವರು ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

`ಎಸ್‌ಇಜೆಡ್~ಗೆ ರಾಜ್ಯದಲ್ಲಿ ಅವಕಾಶವಿಲ್ಲ. ಒಂದು ಕಾರ್ಪೊರೇಟ್ ಕಂಪೆನಿಗಾಗಿ ಈಗಿರುವ ನಿಯಮವನ್ನು ನಾವು ತಿರುಚುವುದಿಲ್ಲ ಎಂದಿದ್ದಾರೆ.

ಇನ್ಫೋಸಿಸ್ ಪಶ್ಚಿಮ ಬಂಗಾಳದಲ್ಲಿ  ಪ್ರತಿ ಎಕರೆಗೆ ರೂ.1.5 ಕೋಟಿ ನೀಡಿ ಒಟ್ಟು  50 ಏಕರೆಗಳಷ್ಟು ಭೂಮಿ ಖರೀದಿಸಿದೆ. ಇತ್ತೀಚೆಗೆ ಕಂಪೆನಿ ಅಲ್ಲಿನ ಗೃಹ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಪತ್ರ ಬರೆದು, `ಎಸ್‌ಇಜೆಡ್~ ಸ್ಥಾನ ಮಾನದ ಕುರಿತು ಸ್ಪಷ್ಟನೆ ನೀಡುವಂತೆ ಕೋರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.