ADVERTISEMENT

ಇನ್ಫೊಸಿಸ್‌ ಹುದ್ದೆಗೆ ದದ್ಲಾನಿ ರಾಜೀನಾಮೆ

ಪಿಟಿಐ
Published 17 ಜೂನ್ 2017, 19:30 IST
Last Updated 17 ಜೂನ್ 2017, 19:30 IST
ಇನ್ಫೊಸಿಸ್‌ ಹುದ್ದೆಗೆ ದದ್ಲಾನಿ ರಾಜೀನಾಮೆ
ಇನ್ಫೊಸಿಸ್‌ ಹುದ್ದೆಗೆ ದದ್ಲಾನಿ ರಾಜೀನಾಮೆ   

ನವದೆಹಲಿ: ಇನ್ಫೊಸಿಸ್‌ನ ಅಮೆರಿಕದಲ್ಲಿನ ವಹಿವಾಟಿನ ಮುಖ್ಯಸ್ಥ ಸಂದೀಪ್‌ ದದ್ಲಾನಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ಒಪ್ಪಿಸಲಾಗಿತ್ತು. ಹೀಗಾಗಿ ಅವರ ಹಠಾತ್‌ ನಿರ್ಗಮನವು ಅಚ್ಚರಿ ಮೂಡಿಸಿದೆ.

‘ಕಳೆದ ಮೂರು ವರ್ಷಗಳಲ್ಲಿ ಸಂಸ್ಥೆಯ  ಬೆಳವಣಿಗೆಯಲ್ಲಿ ಸಂದೀಪ್‌ ಮಹತ್ವದ ಕೊಡುಗೆ ನೀಡಿದ್ದಾರೆ’ ಎಂದು ಸಂಸ್ಥೆಯ ಸಿಇಒ ವಿಶಾಲ್‌ ಸಿಕ್ಕಾ ಹೇಳಿದ್ದಾರೆ. ದದ್ಲಾನಿ ರಾಜೀನಾಮೆಯು ಸಿಕ್ಕಾ ಅವರಿಗೆ ಆದ ಹಿನ್ನಡೆ ಎಂದೇ ವಿಶ್ಲೇಷಿಸಲಾಗಿದೆ.

ನೇಮಕ: ವಿಪ್ರೊದ ಮಾಜಿ ಉದ್ಯೋಗಿ ಇಂದರ್‌ಪ್ರೀತ್‌ ಸಹಾನಿ ಅವರನ್ನು ಇನ್ಫೊಸಿಸ್‌ನ  ಪ್ರಧಾನ ಸಲಹೆಗಾರ್ತಿಯಾಗಿ ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.