ಬೆಂಗಳೂರು (ಐಎಎನ್‌ಎಸ್): ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಇನ್ಫೋಸಿಸ್ ವಿರುದ್ಧ 2ನೇ ಬಾರಿಗೆ ವೀಸಾ ದುರ್ಬಳಕೆಯ ಆರೋಪ ಕೇಳಿ ಬಂದಿದೆ.
ಅಮೆರಿಕ ಪೌರತ್ವ ಪಡೆದಿರುವ ಹಾಗೂ ಇನ್ಫೋಸಿಸ್‌ನ ಮಾಜಿ ಉದ್ಯೋಗಿ ಸತ್ಯದೇವ್ ತ್ರಿಪುರಾನೇನಿ ಎಂಬುವವರು ಈಗಾಗಲೇ ಕ್ಯಾಲಿಫೋರ್ನಿಯಾದ ನ್ಯಾಯಾಲಯದಲ್ಲಿ ಇನ್ಫೋಸಿಸ್ ವಿರುದ್ಧ ವೀಸಾ ದುರ್ಬಳಕೆಯ ಮೊಕದಮ್ಮೆ ಹೂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಇನ್ಫೋಸಿಸ್‌ನ ಬೆಂಗಳೂರು ಕಚೇರಿಯು ಈ ಆರೋಪ ಕುರಿತಂತೆ ತನಿಖೆ ನಡೆಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ಫೋಸಿಸ್‌ನ ಔದ್ಯೋಗಿಕ ಪರಿಹಾರ ವಿಭಾಗದ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದ ಜಾಕ್ ಪಾಲ್ಮರ್ ಎಂಬಾತ ಕಂಪೆನಿ ವಿರುದ್ಧ ವೀಸಾ ದುರ್ಬಳಕೆ ಆರೋಪ ಹೊರಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.