ADVERTISEMENT

ಇ-ಆಡಳಿತ: ಭಾರತಕ್ಕೆ ವಿಶ್ವಬ್ಯಾಂಕ್ ನೆರವು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2011, 19:00 IST
Last Updated 2 ಏಪ್ರಿಲ್ 2011, 19:00 IST

ವಾಷಿಂಗ್ಟನ್ (ಪಿಟಿಐ): ರಾಷ್ಟ್ರೀಯ ಇ-ಆಡಳಿತ ಯೋಜನೆ (ಎನ್‌ಇಜಿಪಿ) ಸಮರ್ಪಕ ಜಾರಿಗಾಗಿ ವಿಶ್ವಬ್ಯಾಂಕ್ ಭಾರತಕ್ಕೆ 150 ದಶಲಕ್ಷ ಡಾಲರ್ ಸಾಲದ ನೆರವು ಪ್ರಕಟಿಸಿದೆ.
ಇ ಆಡಳಿತ ಯೋಜನೆ ಜಾರಿಯಿಂದ ಸರ್ಕಾರಿ ಇಲಾಖೆಗಳ ನಡುವೆ ಮಾಹಿತಿ ವಿನಿಮಯ ಸುಲಭ ಮತ್ತು ಸರಳವಾಗಲಿದೆ. ಇದರಿಂದ ಮೂಲಸೌಕರ್ಯ ಹಾಗೂ  ಸೇವಾ ಶುಲ್ಕ ಗಣನೀಯವಾಗಿ ತಗ್ಗಲಿದ್ದು,  ಯೋಜನೆಗಳು ಫಲಾನುಭವಿಗಳಿಗೆ  ವೇಗವಾಗಿ, ಪಾರದರ್ಶಕವಾಗಿ  ತಲುಪಲಿವೆ ಎಂದು ವಿಶ್ವಬ್ಯಾಂಕ್ ಹೇಳಿದೆ.

‘ಜನರು ತಮ್ಮ ಕೆಲಸಗಳಿಗಾಗಿ ಪ್ರತಿ ಬಾರಿ ಸರ್ಕಾರಿ ಕಚೇರಿಗಳಿಗೂ ಅಲೆದಾಡಬೇಕಿಲ್ಲ. ಅಂತರ್ಜಾಲದ ಅಥವಾ ಸರ್ಕಾರಿ ಜಾಲತಾಣದ ಮೂಲಕ ಇ-ಸೇವೆಯನ್ನು ಎಲ್ಲಿ ಬೇಕೆಂದರಲ್ಲಿ, ಯಾವ ಸಮಯದಲ್ಲಿ ಬೇಕಾದರೂ ಪಡೆಯಬಹುದು. ಹಳ್ಳಿಗಳಲ್ಲಿ ‘ಏಕ ಗವಾಕ್ಷಿ ಬಹುಸೇವಾ ಕೇಂದ್ರಗಳು’  (ಸಿಎಸ್‌ಸಿ) ಅಸ್ತಿತ್ವಕ್ಕೆ ಬರಲಿದ್ದು, ಈ ಮೂಲಕ ಗ್ರಾಮೀಣ ಜನತೆ ಇ-ಆಡಳಿತ ಸೇವೆಯ ಸಂಪೂರ್ಣ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.