ನವದೆಹಲಿ(ಪಿಟಿಐ): ಆನ್‌ಲೈನ್ ಮೂಲಕ(ಇ-ಫೈಲಿಂಗ್) ಆದಾಯ ತೆರಿಗೆ ಲೆಕ್ಕಪತ್ರ ವಿವರ (ಐ.ಟಿ ರಿಟರ್ನ್ಸ್) ಸಲ್ಲಿಸುವವರು ಇನ್ನು ಮುಂದೆ ಅದರ ಮುದ್ರಿತ ಪ್ರತಿಯನ್ನು ಪರಿಶೀಲನೆಗಾಗಿ ಕಳುಹಿಸುವ ಅಗತ್ಯ ಇಲ್ಲ. ಕೇಂದ್ರ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಪ್ರಕಟಣೆ ಹೊರಡಿಸಲಿದೆ.
ಇಲ್ಲಿಯವರೆಗೆ ಆನ್‌ಲೈನ್ ಮೂಲಕ ರಿಟರ್ನ್ಸ್(ವಾರ್ಷಿಕ ಹಣಕಾಸು ಲೆಕ್ಕಪತ್ರ) ಸಲ್ಲಿಸುವವರು ಅದರ ಮುದ್ರಿತ ಪ್ರತಿಯನ್ನು ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ `ಸಿಪಿಟಿ' ವಿಭಾಗಕ್ಕೆ ಪರಿಶೀಲನೆಗಾಗಿ ಕಳುಹಿಸುವುದು ಕಡ್ಡಾಯವಾಗಿತ್ತು.
ಆದರೆ, ಇತ್ತೀಚೆಗೆ `ಎಲೆಕ್ಟ್ರಾನಿಕ್ ಪರಿಶೀಲನೆ' ವ್ಯವಸ್ಥೆಯನ್ನು ತೆರಿಗೆ ಇಲಾಖೆ ಜಾರಿಗೊಳಿಸಿದೆ. ಆದ್ದರಿಂದ ಕಾಗದ ದಾಖಲೆ ರವಾನಿಸುವ ವ್ಯವಸ್ಥೆ ತೆಗೆದು ಹಾಕಲಾಗಿದೆ. ಪ್ರಸಕ್ತ ಹಣಕಾಸು ವರ್ಷದಿಂದ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.