ADVERTISEMENT

ಉಚಿತ ರೋಮಿಂಗ್‌ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ):  ಭಾರತ ಸಂಚಾರ ನಿಗಮ್‌ ಲಿಮಿಟೆಡ್‌ (ಬಿಎಸ್‌­ಎನ್‌­ಎಲ್‌) ಹಾಗೂ ಮಹಾನಗರ ಟೆಲಿಫೋನ್‌ ನಿಗಮ್‌ ಲಿಮಿಟೆಡ್‌ (ಎಂಟಿಎನ್‌ಎಲ್‌) ತಮ್ಮ ಗ್ರಾಹಕರಿಗೆ ಉಚಿತ ರೋಮಿಂಗ್‌ ಸೇವಾ ಸೌಲಭ್ಯ ನೀಡಲು ಜಂಟಿಯಾಗಿ ಕಾರ್ಯನಿರ್ವ­ಹಿಸುತ್ತಿರುವುದಾಗಿ  ತಿಳಿಸಿವೆ.

‘ಎನ್‌ಸಿಆರ್‌’ದಲ್ಲಿ (ರಾಷ್ಟ್ರ ರಾಜ­ಧಾನಿ ವಲಯ), ದೆಹಲಿ ಹೊರತುಪಡಿಸಿ ಬಿಎಸ್‌ಎನ್‌ಎಲ್‌ ಗ್ರಾಹಕರು ರೋಮಿಂಗ್‌ ಪ್ರದೇಶದಲ್ಲಿರುವಾಗ  ಅಂತ­ಹ­­ವರಿಗೆ ಶುಲ್ಕ ವಿಧಿಸಲಾಗು­ವುದಿಲ್ಲ. ವೈಯಕ್ತಿಕ ನೆಲೆಯಲ್ಲಿ ಉಚಿತ ರೋಮಿಂಗ್‌ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವೂ ಇದೆ’ ಎಂದು ಬಿಎಸ್‌ಎನ್‌ಎಲ್‌ ಅಧ್ಯಕ್ಷ ಆರ್‌.ಕೆ. ಉಪಾಧ್ಯಾಯ ತಿಳಿಸಿದ್ದಾರೆ.

ಎಂಎನ್‌ಪಿ ಸೌಲಭ್ಯ
ಮೊಬೈಲ್‌ ನಂಬರ್‌ ಪೊರ್ಟೆಬಿಲಿಟಿ (ಎಂಎನ್‌ಪಿ) ಸೇವಾ ಸೌಲಭ್ಯವು ಶೀಘ್ರದಲ್ಲಿಯೇ  ಆಯಾ ಮೊಬೈಲ್‌ ಚಂದಾದಾರರ ಸೇವಾ ಸೌಲಭ್ಯ ಪ್ರದೇಶದಿಂದ  ದೇಶದ ಯಾವುದೇ ಭಾಗಕ್ಕೂ ವಿಸ್ತರಣೆಯಾಗಲಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.