ADVERTISEMENT

ಎಚ್‌ಪಿಎಲ್ ಮಾರುಕಟ್ಟೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಬೆಂಗಳೂರು: `ಎಚ್‌ಪಿಎಲ್' ಸಮೂಹ ಮಾಡ್ಯುಲರ್ ಸ್ವಿಚ್‌ಗಳ ಮೂಲಕ ಮಾರುಕಟ್ಟೆ ವಿಸ್ತರಿಸುವ ಯೋಜನೆ ರೂಪಿಸಿದೆ. ಇದಕ್ಕಾಗಿ ಎರಡು ನೂತನ ತಯಾರಿಕಾ ಘಟಕಗಳಿಗೆ ರೂ150 ಕೋಟಿ ಹೂಡಿಕೆ ಮಾಡಿದೆ.

ಒಂದು ಘಟಕದಲ್ಲಿ ಸ್ವಿಚ್ ಗೇರ್‌ಗಳು, ದೀಪಗಳು ಮತ್ತು ಲೂಮಿನರೀಸ್ ತಯಾರಿಕೆ ಮಾಡಲಾಗುವುದು. ಇನ್ನೊಂದು ಘಟಕ ಎಲೆಕ್ಟ್ರಾನಿಕ್ ಎನರ್ಜಿ ಮೀಟರ್ ಅಭಿವೃದ್ಧಿಗೆ ಸೀಮಿತವಾಗಿದೆ. ಇದರಿಂದ ಮುಂದಿನ 3 ವರ್ಷಗಳಲ್ಲಿ ರೂ 1500 ಕೋಟಿ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಕಂಪೆನಿಯ ಲಲಿತ್ ಸೇಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.