ADVERTISEMENT

ಎನ್‌ಪಿಎಸ್‌: ಗರಿಷ್ಠ ವಯೋಮಿತಿ ಹೆಚ್ಚಳ ಪ್ರಸ್ತಾವ

ಪಿಟಿಐ
Published 15 ಸೆಪ್ಟೆಂಬರ್ 2017, 19:30 IST
Last Updated 15 ಸೆಪ್ಟೆಂಬರ್ 2017, 19:30 IST

ನವದೆಹಲಿ: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (ಎನ್‌ಪಿಎಸ್‌) ಸೇರ್ಪಡೆಯಾಗುವ ಗರಿಷ್ಠ ವಯೋಮಿತಿಯನ್ನು ಸದ್ಯದ 60 ರಿಂದ 65ರವರೆಗೆ ಹೆಚ್ಚಿಸಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಉದ್ದೇಶಿಸಿದೆ.

‘ಪಿಂಚಣಿ ನಿಧಿಗಳು ಇಲ್ಲದಿರುವ ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ಮತ್ತು  ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಸದಸ್ಯತ್ವ ಕಡ್ಡಾಯವಾಗಿರುವ ಉದ್ದಿಮೆಗಳಲ್ಲಿ ಹೆಚ್ಚುವರಿ ಪಿಂಚಣಿ ಪ್ರಯೋಜನ ರೂಪದಲ್ಲಿ ಎನ್‌ಪಿಎಸ್‌  ಬಳಸಿಕೊಳ್ಳಬಹುದಾಗಿದೆ’ ಎಂದು ‘ಪಿಎಫ್‌ಆರ್‌ಡಿಎ’ ಅಧ್ಯಕ್ಷ ಹೇಮಂತ್‌ ಕಂಟ್ರ್ಯಾಕ್ಟರ್‌ ಹೇಳಿದ್ದಾರೆ.

ಸದ್ಯಕ್ಕೆ ಎನ್‌ಪಿಎಸ್‌ನಲ್ಲಿ 1.71 ಕೋಟಿ ಸದಸ್ಯರು ಇದ್ದಾರೆ. ಒಟ್ಟಾರೆ ಸಂಪತ್ತು ನಿರ್ವಹಣೆ ಮೊತ್ತ ₹ 2.04 ಲಕ್ಷ ಕೋಟಿಗಳಷ್ಟಿದೆ.

ADVERTISEMENT

**

ಹುಂಡೈ ಬೆಲೆ ಏರಿಕೆ

ನವದೆಹಲಿ: ಜಿಎಸ್‌ಟಿ ಸೆಸ್‌ ದರ ಹೆಚ್ಚಳದ ಕಾರಣಕ್ಕೆ ಹುಂಡೈ ಮೋಟಾರ್‌ ಇಂಡಿಯಾ (ಎಚ್‌ಎಂಐಎಲ್‌), ತನ್ನ ವಿವಿಧ ಮಾದರಿಯ ವಾಹನಗಳ
ಬೆಲೆಯನ್ನು ಗರಿಷ್ಠ ₹ 84,867ರವರೆಗೆ ಹೆಚ್ಚಿಸಿದೆ.

ಬೆಲೆ ಹೆಚ್ಚಳವು ಶೇ 2 ರಿಂದ ಶೇ 5ರಷ್ಟು ಹೆಚ್ಚಾಗಿದ್ದು, ಈಗಾಗಲೇ ಜಾರಿಗೆ ಬಂದಿದೆ. ಎಲೈಟ್‌ ‘ಐ20’ ಕಾರ್‌ ಬೆಲೆ ₹ 12,547, ಮಧ್ಯಮ ಗಾತ್ರದ ಹೊಸ ಸೆಡಾನ್‌ ವರ್ನಾ ಬೆಲೆ ₹ 29,090 ತುಟ್ಟಿಯಾಗಿದೆ ಎಂದು ಸಂಸ್ಥೆಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.