ADVERTISEMENT

ಎನ್‌ಪಿಎಸ್‌ ಚಂದಾದಾರರ ಸಂಖ್ಯೆ ಶೇ 27ರಷ್ಟು ಹೆಚ್ಚಳ

ಪಿಟಿಐ
Published 10 ಅಕ್ಟೋಬರ್ 2017, 19:36 IST
Last Updated 10 ಅಕ್ಟೋಬರ್ 2017, 19:36 IST

ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್‌ಪಿಎಸ್‌) ಚಂದಾದಾರರ ಸಂಖ್ಯೆಯು ಸೆಪ್ಟೆಂಬರ್‌ ತಿಂಗಳಾಂತ್ಯಕ್ಕೆ ಶೇ 27ರಷ್ಟು ಏರಿಕೆ ದಾಖಲಿಸಿದೆ.

‘ಚಂದಾದಾರರ ಸಂಖ್ಯೆಯಲ್ಲಿ ಶೇ 27 ಮತ್ತು ಸಂಪತ್ತು ನಿರ್ವಹಣೆಯ ಮೊತ್ತದಲ್ಲಿ  ಶೇ 47ರಷ್ಟು ಹೆಚ್ಚಳವಾಗಿದೆ’ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಪಿಎಫ್‌ಆರ್‌ಡಿಎ) ಪೂರ್ಣಾವಧಿ ಸದಸ್ಯ ಬದ್ರಿ ಎಸ್‌. ಭಂಡಾರಿ ಅವರು ಹೇಳಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಕೇಂದ್ರೋದ್ಯಮಗಳಲ್ಲಿ ಎನ್‌ಪಿಎಸ್‌ ಕುರಿತ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು. ‘ಎನ್‌ಪಿಎಸ್‌ ಜಾರಿಗೆ ಬಂದ ನಂತರದ ದಿನಗಳಲ್ಲಿ ಲಾಭಾಂಶ ಪ್ರಮಾಣವು ಶೇ 10ಕ್ಕಿಂತ ಹೆಚ್ಚಿಗೆ ಇದೆ’ ಎಂದರು.

ADVERTISEMENT

ಪ್ರತಿಯೊಬ್ಬರೂ 65 ವಯಸ್ಸಿನವರೆಗೆ ‘ಎನ್‌ಪಿಎಸ್‌
‘ನ ಸದಸ್ಯತ್ವ ಪಡೆಯಬಹುದು.  ಹಣ ಹಿಂದೆ ಪಡೆಯುವುದನ್ನು ನಿವೃತ್ತಿ ನಂತರದ ಮೂರು ವರ್ಷಗಳವರೆಗೆ ಮುಂದೂಡಬಹುದು. 10 ವರ್ಷಗಳವರೆಗೆ ಹಂತ ಹಂತವಾಗಿ ಸಣ್ಣ ಪ್ರಮಾಣದಲ್ಲಿ ಹಣ ಹಿಂದೆಪಡೆಯಬಹುದಾಗಿದೆ ಎಂದು ‘ಪಿಎಫ್‌ಆರ್‌ಡಿಎ’ ಅಧ್ಯಕ್ಷ ಹೇಮಂತ್‌ ಕಾಂಟ್ರ್ಯಾಕ್ಟರ್‌ ಹೇಳಿದ್ದಾರೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು (ಎನ್‌ಪಿಎಸ್‌) ಸ್ವ ಇಚ್ಛೆಯ, ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಉದ್ಯೋಗದಲ್ಲಿ ಇರುವಾಗ ಭವಿಷ್ಯದ ಅಗತ್ಯಗಳಿಗಾಗಿ ವ್ಯವಸ್ಥಿತ ರೀತಿಯಲ್ಲಿ ಉಳಿತಾಯ ಮಾಡುವ ಸೌಲಭ್ಯ ಇದರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.