ADVERTISEMENT

ಎನ್‌ಆರ್‌ಐ ಠೇವಣಿ ₨6.14 ಲಕ್ಷ ಕೋಟಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ದುಬೈ(ಪಿಟಿಐ): ಒಮಾನ್‌ನಲ್ಲಿರುವ ಭಾರತೀಯ ಬ್ಯಾಂಕುಗಳಲ್ಲಿ  ಅನಿವಾಸಿ ಭಾರತೀ­ಯರು ಹೊಂದಿರುವ ಠೇವಣಿ ಜನವರಿ ಅಂತ್ಯದ ವೇಳೆಗೆ ಶೇ 43.5­ರಷ್ಟು ಏರಿಕೆ ಕಂಡಿದ್ದು 9915 ಕೋಟಿ ಡಾಲರ್‌ (₨6.14 ಲಕ್ಷ ಕೋಟಿ) ತಲುಪಿದೆ.

2013ರ ಡಿಸೆಂಬರ್‌ನಲ್ಲಿ ಇದು 9863 ಕೋಟಿ ಡಾಲರ್‌ (₨6.11 ಲಕ್ಷ ಕೋಟಿ)ಗಳಷ್ಟಿತ್ತು.  ಅನಿವಾಸಿ  ಭಾರತೀ ಯರ ವಿದೇಶಿ ಕರೆನ್ಸಿ ಠೇವಣಿಯೂ (ಎಫ್‌­ಸಿಎನ್‌­ಆರ್‌)  4070 ಕೋಟಿ ಡಾಲರ್‌ಗಳಿಗೆ (₨2.52 ಲಕ್ಷ ಕೋಟಿ) ಏರಿಕೆ ಕಂಡಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ವರದಿ ಆಧರಿಸಿ ಟೈಮ್ಸ್ ಆಫ್‌ ಒಮಾನ್‌  ವರದಿ ಮಾಡಿದೆ.

ಡಾಲರ್‌ ವಿರುದ್ಧ ರೂಪಾಯಿ ಅಪ ಮೌಲ್ಯದ ಹಿನ್ನೆಲೆಯಲ್ಲಿ ‘ಎನ್‌ಆರ್‌ಐ’ ಠೇವಣಿ ಆಕರ್ಷಿಸಲು ‘ಆರ್‌ಬಿಐ’ ಆಗ ಸ್ಟ್‌ನಿಂದ ಸೆಪ್ಟೆಂಬರ್‌ ನಡುವೆ ಕೈಗೊಂಡ ಕ್ರಮಗಳೇ ಈಗಿನ ಏರಿಕೆಗೆ ಪ್ರಮುಖ ಕಾರಣ ಎಂದೂ ಈ ವರದಿ ಹೇಳಿದೆ. ಆದರೆ, ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ಸ್ಥಿರಗೊಂಡ ನಂತರ, ‘ಎನ್‌ಆರ್‌ ಐ’ ಹೂಡಿಕೆಯಲ್ಲಿ ದೊಡ್ಡ ಮಟ್ಟದ ಏರಿಳಿತವೇನೂ ಆಗಿಲ್ಲ ಎಂದೂ ಹೇಳಿದೆ.

ವಿಶ್ವಬ್ಯಾಂಕಿನ  ವರದಿಯಂತೆ ಅನಿ ವಾಸಿ ಭಾರತೀಯರಿಂದ 2013ನೇ ಸಾಲಿನಲ್ಲಿ ಭಾರತಕ್ಕೆ 7100 ಕೋಟಿ ಡಾಲರ್‌­ಗಳಷ್ಟು (₨4.40 ಲಕ್ಷ ಕೋಟಿ), ಚೀನಾಕ್ಕೆ 6000 ಕೋಟಿ ಡಾಲರ್‌­ಗಳಷ್ಟು (₨3.72 ಲಕ್ಷ ಕೋಟಿ)  ವಿದೇಶಿ ವಿನಿಮಯ ಹರಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.