ADVERTISEMENT

ಎಲ್‌ಐಸಿ: 2 ಲಕ್ಷ ಕೋಟಿ ಠೇವಣಿ ಸಂಗ್ರಹ ಗುರಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:15 IST
Last Updated 16 ಫೆಬ್ರುವರಿ 2011, 18:15 IST

ಪಶ್ಚಿಮ ಬಂಗಾಳ (ಪಿಟಿಐ):  ಪ್ರಸಕ್ತ ಹಣಕಾಸು ವರ್ಷದಲ್ಲಿ ಠೇವಣಿ ವರಮಾನವು ್ಙ 2,00,000 ಕೋಟಿ ದಾಟಲಿದೆ ಎಂದು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹೇಳಿದೆ.

ಇತ್ತೀಚೆಗೆ ನಡೆದಿರುವ ಯಾವುದೇ ಹಗರಣಗಳು ಎಲ್‌ಐಸಿ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿಲ್ಲ. ಮುಂದಿನ ಹಣಕಾಸು ವರ್ಷದಲ್ಲಿ ಠೇವಣಿ ವರಮಾನವು ಶೇಕಡ 16ರಿಂದ 17ರಷ್ಟು ವೃದ್ಧಿ ಕಾಣಲಿದೆ ಎಂದು ‘ಎಲ್‌ಐಸಿ’ ಅಧ್ಯಕ್ಷ ಟಿ.ಎಸ್ ವಿಜಯನ್  ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.