ADVERTISEMENT

ಎಸ್ಸಾರ್ ಮನವಿ?

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ನವದೆಹಲಿ (ಪಿಟಿಐ): ಆದಾಯ ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವೊಡಾಫೋನ್ ಪರವಾಗಿ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ಎಸ್ಸಾರ್ ಕಂಪೆನಿಯು ಆದಾಯ ತೆರಿಗೆ ಇಲಾಖೆಗೆ 883 ದಶಲಕ್ಷ ಡಾಲರ್ ತೆರಿಗೆ ಮರುಪಾವತಿಸುವಂತೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಕಳೆದ ವರ್ಷ ಎಸ್ಸಾರ್ ಕಮ್ಯುನಿಕೇಷನ್ಸ್, ವೊಡಾಫೋನ್ ಎಸ್ಸಾರ್‌ನಲ್ಲಿನ ಶೇ22ರಷ್ಟು ಪಾಲನ್ನು ಮಾರಾಟ ಮಾಡಿತ್ತು. ಹಾಗೂ ಇದಕ್ಕೆ ಸಂಬಂಧಿಸಿದಂತೆ  883 ದಶಲಕ್ಷ ಡಾಲರ್ ತೆರಿಗೆ ಪಾವತಿಸಿತ್ತು.

ಸಾಗರೋತ್ತರ ವಹಿವಾಟಿನ ಮೇಲೆ ತೆರಿಗೆ ವಿಧಿಸುವ ಅಧಿಕಾರವು ದೇಶಿ ತೆರಿಗೆ ಪ್ರಾಧಿಕಾರಗಳಿಗೆ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ನೇತೃತ್ವದ ತ್ರಿಸದಸ್ಯ ಪೀಠವು ತೀರ್ಪು ನೀಡಿತ್ತು.

ನ್ಯಾ.ಕೆ.ಎಸ್. ರಾಧಾಕೃಷ್ಣನ್ ಮತ್ತು ನ್ಯಾ. ಸ್ವತಂತ್ರ ಕುಮಾರ್ ಅವರು ಪೀಠದ ಇತರ ಸದಸ್ಯರಾಗಿದ್ದರು. ಪ್ರತ್ಯೇಕವಾದ ಆದರೆ, ಸಹಮತ ಹೊಂದಿರುವ ತೀರ್ಪನ್ನು ನ್ಯಾ. ಕೆ. ಎಸ್. ರಾಧಾಕೃಷ್ಣನ್ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.