ADVERTISEMENT

ಏರ್‌ಏಷ್ಯಾ ಆಕ್ಟೋಬರ್‌ಗೆ ಆರಂಭ?

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST

ನವದೆಹಲಿ(ಪಿಟಿಐ): ಅಗ್ಗದ ದರದ ಬಹು ನಿರೀಕ್ಷೆಯ `ಏರ್ ಏಷ್ಯಾ ಇಂಡಿಯಾ' ವಿಮಾನಯಾನ ಸಂಸ್ಥೆ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಕಾರ್ಯಾರಂಭ ಮಾಡುವುದು ಬಹುತೇಕ ಖಚಿತವಾಗಿದೆ.

`ಏರ್ ಏಷ್ಯಾ ಇಂಡಿಯಾ'ದ ಮಾರ್ಗದರ್ಶಕ ರತನ್ ಟಾಟಾ, ನೂತನ `ಸಿಇಒ' ಮಿಟ್ಟು ಚಾಂಡಿಲ್ಯ ಮತ್ತು ಏರ್‌ಏಷ್ಯಾ ಸಮೂಹದ ಮುಖ್ಯಸ್ಥ ಟೋನಿ ಫರ್ನಾಂಡಿಸ್  ಸೇರಿದಂತೆ ಸಂಸ್ಥೆಯ ಪ್ರಮುಖರು ಮಂಗಳವಾರ ಇಲ್ಲಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ, ಗೃಹ ಸಚಿವ ಸುಶೀಲ್‌ಕುಮಾರ್ ಶಿಂದೆ, ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮಾ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಮಲೇಷಿಯದ ಏರ್ ಏಷ್ಯಾ, ಟಾಟಾ ಸಮೂಹ ಮತ್ತು ಟೆಲೆಸ್ಟ್ರಾ ಟ್ರೇಡ್‌ಪ್ಲೇಸ್‌ನ ಅರುಣ್ ಭಾಟಿಯಾ ಅವರ ಸಂಸ್ಥೆ 49:30:21ರ ಅನುಪಾತದಲ್ಲಿ ಬಂಡವಾಳ ತೊಡಗಿಸಿ `ಏರ್ ಏಷ್ಯಾ ಇಂಡಿಯಾ' ಆರಂಭಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.