ಬೆಂಗಳೂರು: ಏಸಸ್ ಟೆಕ್ನಾಲಜಿ ಸಂಸ್ಥೆಯು ಅತ್ಯಂತ ತೆಳ್ಳನೆಯ (ಅಲ್ಟ್ರಾ ಥಿನ್) ನೋಟ್ಬುಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. `ಏಸಸ್ ಎಕ್ಸ್101~ ಹೆಸರಿನ ಈ ನೋಟ್ಬುಕ್ `ಇಂಟೆಲ್ ಮೀಗೋ ಆಪರೇಟಿಂಗ್ ಸಿಸ್ಟಮ್~ನಿಂದ ಕಾರ್ಯನಿರ್ವಹಿಸಲಿದೆ.
1 ಕೆ.ಜಿ.ಗಿಂತ ಕಡಿಮೆ ತೂಕದ ಈ ನೋಟ್ಬುಕ್, 17.5 ಮಿಲಿ ಮೀಟರ್ನಷ್ಟು ತೆಳುವಾಗಿದೆ. ಇದಕ್ಕೆ ಯಾವುದೇ ವೈರಸ್ ನಿರೋಧಕ ಸಾಫ್ಟ್ವೇರ್ನ ಅಗತ್ಯವಿಲ್ಲ ಎಂಬುದು ವಿಶೇಷ. ಇದರ ಬೆಲೆ ರೂ12,499.
ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ನೋಟ್ಬುಕ್ ಅನ್ನು ಬಿಡುಗಡೆ ಮಾಡಿ, ಮಾತನಾಡಿದ ಏಸಸ್ ಟೆಕ್ನಾಲಜಿ ಸಂಸ್ಥೆಯ (ಭಾರತ) ಮುಖ್ಯಸ್ಥ ಅಲೆಕ್ಸ್ ಹೌಂಗ್, `ಗ್ರಾಹಕರಿಗೆ ಅತ್ಯುತ್ತಮ ಅನುಭವ ಸಿಗುವ ಹಾಗೆ ಹೊಸ ನೋಟ್ಬುಕ್ನಲ್ಲಿ ಪರಿಕರಗಳನ್ನು ಅಳವಡಿಸಲಾಗಿದೆ~ ಎಂದರು.
`ಹೊಸ ಉತ್ಪನ್ನವು ವೈಯಕ್ತಿಕ ಕಂಪ್ಯೂಟರ್ ಕ್ಷೇತ್ರದಲ್ಲಿ ಹೊಸ ಅಲೆಗೆ ಕಾರಣವಾಗಲಿದೆ. ಜಗತ್ತಿನಾದ್ಯಂತ 10 ಸಾವಿರ ಉದ್ಯೋಗಿಗಳು, 3000 ಎಂಜಿನಿಯರುಗಳನ್ನು ಹೊಂದಿರುವ ಏಸಸ್ ಕಂಪೆನಿಯು 2010ರಲ್ಲಿ 10.1 ಶತಕೋಟಿ ಡಾಲರ್ಗಳಷ್ಟು ಲಾಭ ಗಳಿಸಿದೆ~ ಎಂದು ವಿವರಿಸಿದರು.
ಇಂಟೆಲ್ ದಕ್ಷಿಣ ಏಷ್ಯಾದ ಹೊಸ ವಹಿವಾಟು ವಿಭಾಗದ ನಿರ್ದೇಶಕ ಪ್ರಶಾಂತ್ ಆದಿರಾಜು ಮಾತನಾಡಿ, `10.1 ಇಂಚಿನ ಮಾನಿಟರ್, ಅತ್ಯುತ್ತಮ ಬ್ಯಾಟರಿ ಬ್ಯಾಕ್ಅಪ್, ಬ್ಲೂಟೂಥ್, ವೈ ಫೈ ಮೊದಲಾದ ಸೌಕರ್ಯಗಳನ್ನು ಈ ನೋಟ್ಬುಕ್ ಹೊಂದಿದೆ~ ಎಂದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.