ADVERTISEMENT

ಐಒಸಿ, ಎಚ್‌ಪಿಸಿಎಲ್‌ಗೆ ಗರಿಷ್ಠ ವರಮಾನ ನಷ್ಟ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2012, 19:30 IST
Last Updated 10 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ):  ಇಂಡಿಯನ್‌ಆಯಿಲ್ ಕಾರ್ಪೊರೇಷನ್ (ಐಒಸಿ) ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂ 22,451 ಕೋಟಿ ನಿವ್ವಳ ನಷ್ಟ ಅನುಭವಿಸಿದೆ. ಸರ್ಕಾರಿ ಸ್ವಾಮ್ಯದ ಕಂಪೆನಿಯೊಂದು ಅನುಭವಿಸುತ್ತಿರುವ ಗರಿಷ್ಠ ಮಟ್ಟದ ತ್ರೈಮಾಸಿಕ ನಷ್ಟ ಇದಾಗಿದೆ. 

 ದೇಶದ ಮೂರನೆಯ ಅತಿ ದೊಡ್ಡ ತೈಲ ಮಾರಾಟ ಕಂಪೆನಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್) ಕೂಡ ಮೊದಲ ತ್ರೈಮಾಸಿಕದಲ್ಲಿ ರೂ9,249 ಕೋಟಿ ನಿವ್ವಳ ನಷ್ಟ ಅನುಭವಿಸಿದೆ.

ಡೀಸೆಲ್, ಅಡುಗೆ ಅನಿಲ, ಮತ್ತು ಸೀಮೆ ಎಣ್ಣೆ ದರಗಳು ಸರ್ಕಾರಿ ನಿಯಂತ್ರಣದಲ್ಲಿುವುರಿಂದ  ತೈಲ ಕಂಪೆನಿಗಳು ಪ್ರತಿ ದಿನ ರೂ 710 ಕೋಟಿನಷ್ಟ ಅನುಭವಿಸುತ್ತಿವೆ. ಸರ್ಕಾರ ನಷ್ಟಭರ್ತಿಗೆ ಮುಂದಾಗಬೇಕು ಎಂದು  `ಐಒಸಿ~ ಮುಖ್ಯಸ್ಥ ಆರ್.ಎಸ್ ಬೊಟೊಳ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.