ADVERTISEMENT

ಐಟಿಬಿ ಬರ್ಲಿನ್ ಪ್ರವಾಸಿ ಮೇಳ: ರಾಜ್ಯದ ಮಳಿಗೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 19:30 IST
Last Updated 8 ಮಾರ್ಚ್ 2012, 19:30 IST
ಐಟಿಬಿ ಬರ್ಲಿನ್ ಪ್ರವಾಸಿ ಮೇಳ: ರಾಜ್ಯದ ಮಳಿಗೆ
ಐಟಿಬಿ ಬರ್ಲಿನ್ ಪ್ರವಾಸಿ ಮೇಳ: ರಾಜ್ಯದ ಮಳಿಗೆ   

ಬೆಂಗಳೂರು: ಈ ತಿಂಗಳ 11ರವರೆಗೆ ಬರ್ಲಿನ್‌ನಲ್ಲಿ ನಡೆಯಲಿರುವ ಜಾಗತಿಕ ಪ್ರವಾಸೋದ್ಯಮ ಮೇಳದಲ್ಲಿ ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯ ಮಳಿಗೆಯು ಪ್ರವಾಸಿಗರನ್ನು ಗಮನಾರ್ಹವಾಗಿ ಸೆಳೆಯುತ್ತಿದೆ. 
`ಐಟಿಬಿ ಬರ್ಲಿನ್~ ವಿಶ್ವದ ಪ್ರಮುಖ ಪ್ರವಾಸೋದ್ಯಮ ಮೇಳವಾಗಿದೆ. 180 ದೇಶಗಳ 10 ಸಾವಿರಕ್ಕೂ ಹೆಚ್ಚು ಪ್ರದರ್ಶಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ.

ರಾಜ್ಯದ ಪ್ರವಾಸೋದ್ಯಮ ಇಲಾಖೆಯ ನಿಯೋಗದಲ್ಲಿ, ಪ್ರವಾಸೋದ್ಯಮ ಪ್ರಧಾನ ಕಾರ್ಯದರ್ಶಿ ಜಿ. ಲತಾ ಕೃಷ್ಣರಾವ್, ನಿರ್ದೇಶಕ ಕೆ. ವಿಶ್ವನಾಥ ರೆಡ್ಡಿ ಮತ್ತು ಜಂಗಲ್ ಲಾಡ್ಜಸ್ ಆಂಡ್ ರೆಸಾರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅನುರ್ ರೆಡ್ಡಿ ಇದ್ದಾರೆ.

ರಾಜ್ಯದ ಪ್ರವಾಸೋದ್ಯಮ ಮಳಿಗೆಯು, ಮೇಳದಲ್ಲಿನ ಮುಂಚೂಣಿ 16 ಮಳಿಗೆಗಳಲ್ಲಿ ಒಂದಾಗಿದ್ದು, ಯಕ್ಷಗಾನ ಕಲಾವಿದರು ವಿದೇಶಗಳ ಪ್ರವಾಸಿಗರ ಗಮನ ಸೆಳೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.