ADVERTISEMENT

ಐಡಿಯಾ:ಸೇವೆಗೆ ಧಕ್ಕೆ ಇಲ್ಲ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಬೆಂಗಳೂರು: ಸ್ಪೈಸ್ ಕಮ್ಯುನಿಕೇಷನ್ ಜತೆ ವಿಲೀನಗೊಂಡಿರುವ ಐಡಿಯಾ ಸೆಲ್ಯುಲರ್‌ನ ಮೊಬೈಲ್ ಸೇವೆಗೆ ಯಾವುದೇ ಧಕ್ಕೆ ಒದಗುವುದಿಲ್ಲ ಎಂದು   ಸ್ಪಷ್ಟಪಡಿಸಲಾಗಿದೆ. `2ಜಿ~ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು 2008ರಲ್ಲಿ  ನೀಡಿರುವ ಲೈಸನ್ಸ್‌ಗಳಿಗೆ ಮಾತ್ರ ಅನ್ವಯಗೊಳ್ಳುತ್ತದೆ. 

ಸ್ಪೈಸ್ ಕಮ್ಯುನಿಕೇಷನ್ನಿಗೆ 1995 ರಲ್ಲಿಯೇ ಲೈಸನ್ಸ್ ದೊರೆತಿದೆ. ಹೀಗಾಗಿ ದೇಶದಾದ್ಯಂತ ಐಡಿಯಾ ಮೊಬೈಲ್ ಸೇವೆಗೆ ಯಾವುದೇ ಅಡಚಣೆ ಉಂಟಾಗಲಾರದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.