
ಪ್ರಜಾವಾಣಿ ವಾರ್ತೆಮುಂಬೈ (ಪಿಟಿಐ): ಐಸಿಐಸಿಐ ಬ್ಯಾಂಕ್ 2011-12ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ರೂ 1,902 ಕೋಟಿ ನಿವ್ವಳ ಲಾಭ ಗಳಿಸಿದೆ.
2010-11ರ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ 31ರಷ್ಟು ಏರಿಕೆ ಕಂಡಿದೆ. 2011-12ನೇ ಸಾಲಿನ ಜನವರಿ- ಮಾರ್ಚ್ ಅವಧಿಯಲ್ಲಿ ಬ್ಯಾಂಕಿನ ಒಟ್ಟು ವರಮಾನ ರೂ 11,403 ಕೋಟಿಗೆ ಏರಿಕೆಯಾಗಿದೆ.
ನಾಲ್ಕೂ ತ್ರೈಮಾಸಿಕ ಅವಧಿ ಸೇರಿ ಬ್ಯಾಂಕಿನ ನಿವ್ವಳ ಲಾಭ ಶೇ 26ರಷ್ಟು ಹೆಚ್ಚಿದ್ದು, ರೂ 6,465 ಕೋಟಿಗಳಷ್ಟಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.