ADVERTISEMENT
‘ಒನ್‌ ಪ್ಲಸ್‌ 6’ ಬೆಲೆ ₹36,999
ಏಜೆನ್ಸೀಸ್
Published 30 ಏಪ್ರಿಲ್ 2018, 13:41 IST
Last Updated 30 ಏಪ್ರಿಲ್ 2018, 13:41 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.
ನವದೆಹಲಿ: ‘ಒನ್‌ಪ್ಲಸ್ 6’ ಸ್ಮಾರ್ಟ್‌ಫೋನ್‌ನ ಬೆಲೆ ₹36,999 ಇರಬಹುದು ಎಂದು ‘ಎನ್‌ಡಿಟಿವಿ ಗ್ಯಾಜೆಟ್ಸ್‌’ ಸೋಮವಾರ ವರದಿ ಮಾಡಿದೆ. ಚೀನಾ ಮೂಲದ ಮೊಬೈಲ್‌ ಸಂಸ್ಥೆ ‘ಒನ್‌ ಪ್ಲಸ್‌’ ಆರನೇ ಆವತರಣಿಕೆಯನ್ನು ಮೇ 17ರಂದು ಮುಂಬೈನಲ್ಲಿ ಬಿಡುಗಡೆ ಮಾಡಲಿದೆ. ಈ ಕುರಿತು ಒನ್‌ ಪ್ಲಸ್‌ ಕಂಪೆನಿ ಬುಧವಾರ ಅಧಿಕೃತ ಹೇಳಿಕೆ ನೀಡಿದೆ.
ಚೀನಾ ದೇಶದ ಶಿಯೋಮಿ ಮತ್ತು ಒನ್ ಪ್ಲಸ್ ಕಂಪೆನಿಗಳು ತಮ್ಮ ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ಫೋನ್‌ಗಳನ್ನು ನೀಡಲು ಹೊಸ ಮಾರಾಟ ನೀತಿ ಅನುಸರಿಸುತ್ತಿವೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ₹999 ಬೆಲೆಯ ಗಿಫ್ಟ್‌ ವೋಚರ್‌, ಕ್ಯಾಶ್‌ ಕೆನಾನ್‌, ಕಂಪೆನಿಯ ಬ್ರಾಂಡೆಡ್‌ ಬ್ಯಾಗ್‌, ಟೀ–ಶಾರ್ಟ್‌, ನೋಟ್‌ಬುಕ್‌ ನೀಡಲಾಗುತ್ತದೆ. ಉದ್ಘಾಟನಾ ಕಾರ್ಯಕ್ರಮವನ್ನು ಫೇಸ್‌ಬುಕ್‌, ಟ್ವಿಟರ್‌, ಯುಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದೆಂದು ಕಂಪೆನಿ ತಿಳಿಸಿದೆ.
ಗುಣಲಕ್ಷಣಗಳು
ADVERTISEMENT
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.