ನವದೆಹಲಿ (ಪಿಟಿಐ): ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ನೀಡುವ ಖರೀದಿ ಬೆಲೆ (ಎಫ್ಆರ್ಪಿ) ಕ್ವಿಂಟಲ್ಗೆ ರೂ. 40 ಹೆಚ್ಚುವ ಸಾಧ್ಯತೆ ಇದೆ.
ಕೇಂದ್ರ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ (ಸಿಸಿಇಎ) ಇದಕ್ಕೆ ಸಂಬಂಧಿಸಿದಂತೆ ಗುರುವಾರ ಸಭೆ ಸೇರಲಿದ್ದು, `ಎಫ್ಆರ್ಪಿ' ನಿಗದಿ ಮಾಡಲಿದೆ.
ಕೃಷಿ ವೆಚ್ಚ ಮತ್ತು ದರ ಸಮಿತಿ (ಸಿಎಸಿಪಿ) ನೀಡಿದ ಶಿಫಾರಸು ಆಧರಿಸಿ, ಆಹಾರ ಸಚಿವಾಲಯ 2013-14ನೇ ಸಾಲಿನ ಕಬ್ಬಿನ ಇಳುವರಿ ವರ್ಷದಿಂದ (ಅಕ್ಟೋಬರ್-ಸೆಪ್ಟೆಂಬರ್) `ಎಫ್ಆರ್ಪಿ' ಶೇ 23.5ರಷ್ಟು (ರೂ.40) ಹೆಚ್ಚಿಸಬೇಕು ಎಂದು ಮನವಿ ಮಾಡಿತ್ತು. 2012-13ನೇ ಸಾಲಿನಲ್ಲಿ ಪ್ರತಿ ಕ್ವಿಂಟಲ್ ಕಬ್ಬಿಗೆ ರೂ.170 ದರ ನಿಗದಿ ಮಾಡಲಾಗಿತ್ತು.
`ಸಿಎಸಿಪಿ' ಶಾಸನಬದ್ಧ ಸಂಸ್ಥೆಯಾಗಿದ್ದು, ಪ್ರಮುಖ ಕೃಷಿ ಉತ್ಪನ್ನಗಳ ದರ ನಿಗದಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆ ನೀಡುತ್ತದೆ. `ಸಿಎಸಿಪಿ' ನೀಡಿದ ವರದಿಯನ್ನು ಆಹಾರ ಸಚಿವಾಲಯ ಒಪ್ಪಿದೆ.
ಆರ್ಥಿಕ ವ್ಯವಹಾರಗಳ ಸಮಿತಿ ಇದನ್ನು ಅಂತಿಮವಾಗಿ ಅನುಮೋದಿಸಬೇಕಿದೆ. ಪ್ರಪಂಚದಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆಯುವ ಎರಡನೆಯ ದೇಶ ಭಾರತ. 2012-13ನೇ ಸಾಲಿನಲ್ಲಿ 24 ದಶಲಕ್ಷ ಟನ್ ಕಬ್ಬು ಇಳುವರಿ ನಿರೀಕ್ಷಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.